-->

ದೀಪಾವಳಿ ಮಹತ್ವ Importance of Deepawali

ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನ ಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿ ಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ.
 
ದೀಪಾವಳಿ ಮಹತ್ವ  Importance of Deepawali
 
ದೀಪಾವಳಿ ಅರ್ಥ ಏನು? ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ. ಭಗವಾನ ಶ್ರೀಕೃಷ್ಣನು ಅಸುರಿವೃತ್ತಿಯ ನರಕಾಸುರನನ್ನು ವಧಿಸಿ ಜನರನ್ನು ಭೋಗವಾದ, ಲೋಭ, ಅನಾಚಾರ ಹಾಗೂ ದುಷ್ಟ ಪ್ರವೃತ್ತಿಯಿಂದ ಮುಕ್ತಗೊಳಿಸಿ ದನು ಮತ್ತು ಪ್ರಭು ವಿಚಾರ (ದೈವೀ ವಿಚಾರ)ವನ್ನು ನೀಡಿ ಸುಖವನ್ನು ನೀಡಿ ದನು. ಇದುವೇ ದೀಪಾವಳಿ.  
 
ಗೋಪೂಜೆ (ಗೋವತ್ಸದ್ವಾದಶಿ)ಯನ್ನು ಯಾಕೆ ಮಾಡುತ್ತಾರೆ? ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಹ ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿ ರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆ ಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವ ರ್ಧನೆಯಾಗುತ್ತದೆಯೋ ಹಾಗೂ ಪೂಜ್ಯಭಾವದಿಂದ ಅವಳನ್ನು ಪೂಜಿಸಲಾ ಗುತ್ತದೆಯೋ, ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನ ಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿ ಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ.    
 
ಧನತ್ರಯೋದಶಿಯಂದು ಬಂಗಾರ ವನ್ನು ಯಾಕೆ ಖರೀದಿಸುತ್ತಾರೆ? ಧನತ್ರಯೋದಶಿಯಂದು ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮೀಯು ವಾಸಿಸುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮೀ ಪೂಜೆಯ ಸಮಯದಲ್ಲಿ ನಮಗೆ ಸಂಪೂರ್ಣ ವರ್ಷದ ಜಮಾ-ಖರ್ಚಿನ ಲೆಕ್ಕವನ್ನು ನೋಡುವುದಿರುತ್ತದೆ. ಧನತ್ರಯೋದಶಿಯ ವರೆಗೆ ಲೆಕ್ಕಾಚಾರ ವನ್ನು ನೋಡಿ ಉಳಿದಿರುವ ಸಂಪತ್ತನ್ನು ಭಗವಂತನ ಕಾರ್ಯಕ್ಕಾಗಿ ಉಪಯೋಗಿ ಸಿದರೆ, ’ಸತ್‌ಕಾರ್ಯಕ್ಕಾಗಿ ಹಣವು ಖರ್ಚಾಗುವುದರಿಂದಾಗಿ ಧನ ಲಕ್ಷ್ಮೀಯು ಕೊನೆಯತನಕ ಲಕ್ಷ್ಮೀಯ ರೂಪದಲ್ಲಿ ಮನೆಯಲ್ಲಿ ವಾಸಿಸುತ್ತಾಳೆ.  
 
ನರಕಚತುರ್ದಶಿ ಅಂದರೆ ಏನು? ಶ್ರೀಕೃಷ್ಣನು ಈ ದಿನದಂದು ನರಕಾಸುರನನ್ನು ವಧಿಸಿದನು; ಆದುದರಿಂದ ಈ ದಿನವನ್ನು ನರಕಚತುರ್ದಶಿ ಎಂದು ಕರೆಯುತ್ತಾರೆ. ಇದರ ಅರ್ಥವು ’ದುರ್ಜನ ಶಕ್ತಿಯ ಮೇಲೆ ಸಜ್ಜನ ಶಕ್ತಿಯ ವಿಜಯ’ ಎಂದಾಗುತ್ತದೆ. ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. ’ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ.’ ಸಜ್ಜನವ್ಯಕ್ತಿಗಳು ಸಂಘಟಿತರಾಗಿ ತಮ್ಮ ಜ್ಞಾನದ ಲಾಭವನ್ನು ಸಮಾಜಕ್ಕೆ ನೀಡಬೇಕು. ಈ ವಿಷಯವೇ ನರಕ ಚರ್ತು ದಶಿಯಿಂದ ಕಂಡುಬರುತ್ತದೆ. ನರಕಚತುರ್ದಶಿ ಎಂದರೆ ನರಕರೂಪೀ ವಾಸನೆಗಳನ್ನು ಹಾಗೂ ಅಹಂಕಾರದ ಉಚ್ಚಾಟನೆಯನ್ನು ಮಾಡಿ ಆತ್ಮಜ್ಯೋತಿಯನ್ನು ಪ್ರಕಾಶಿಸುವ ದಿನವೂ ಆಗಿದೆ.  
 
ಲಕ್ಷ್ಮೀಪೂಜೆ ಅಂದರೆ ಏನು? ಕಾರಹುಣ್ಣಿಮೆ ಮತ್ತು ಆಶ್ವಯುಜ ಅಮಾವಾಸ್ಯೆಯಂದು ಲಕ್ಷ್ಮೀಯ ಪೂಜೆ ಯನ್ನು ಮಾಡುತ್ತಾರೆ. ಹುಣ್ಣಿಮೆ ಹಾಗೂ ಅಮಾವಾಸ್ಯೆ ಇವೆರಡೂ ಶುಭವೇ ಆಗಿವೆ ಎಂಬುದು ಇದರ ಹಿಂದಿನ ರಹಸ್ಯವಾಗಿದೆ. ’ಹಿರಣ್ಯಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದಂತಹ ಲಕ್ಷ್ಮೀ ಯನ್ನು ವಾದ್ಯ ಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡು ವುದೆಂದರೆ ಲಕ್ಷ್ಮೀಪೂಜೆ.’  
 
ಈ ಅಮಾವಾಸ್ಯೆಯು ಯಾಕೆ ಶ್ರೇಷ್ಠವಾಗಿದೆ? ಅಮಾವಾಸ್ಯೆಯು ಏಕತ್ವವನ್ನು ತೋರಿ ಸುತ್ತದೆ. ಈ ಅಮಾವಾಸ್ಯೆಯ ದಿನದಂದು ದೀಪಗಳ ಹೊಳಪು ಎಲ್ಲೆಡೆಯೂ ಶೋಭಿ ಸುತ್ತಿರುತ್ತದೆ. ಆದುದರಿಂದಲೇ ಈ ಅಮಾ ವಾಸ್ಯೆಯು ಪವಿತ್ರವಾಗಿದೆ. ಶರದ ಋತು ವಿನಲ್ಲಿ ಆಶ್ವಯುಜ ಮಾಸದ ಹುಣ್ಣಿಮೆ ಮತ್ತು ಈ ಅಮಾ ವಾಸ್ಯೆಯು ಕಲ್ಯಾಣP ರಿಯಾಗಿವೆ. ಅಲ್ಲದೆ ಅವು ಎಲ್ಲ ಸಮೃದ್ಧಿ ಗಳನ್ನು ತರುವಂತ ಹವುಗಳಾಗಿವೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪರಿಶ್ರಮ ಪಟ್ಟ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ; ಕೃಷಿಯಿಂದ ಉತ್ಪನ್ನ ವಾದ ಬೆಳೆಯೇ ನಿಜವಾದ ಲಕ್ಷ್ಮೀಯಾಗಿದೆ    
 
ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಯಾಕೆ ಮಾಡುತ್ತಾರೆ? ದೀಪಾವಳಿಯಲ್ಲಿನ ಕಾರ್ತಿಕ ಮಾಸದ ಪಾಡ್ಯ ಅಂದರೆ ಬಲಿಪಾಡ್ಯ. ಈ ದಿನ ದಂದು ಭಗವಂತನು ವಾಮನ ರೂಪದಲ್ಲಿ ಅವತರಿಸಿ ಸರ್ವಸ್ವ ವನ್ನು ಅರ್ಪಿಸಿ ದಾಸನಾಗುವ ಸಿದ್ಧತೆಯನ್ನೂ ತೋರಿಸಿದ್ದಾನೆ. ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನು ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿ ಅವನನ್ನು ಉದ್ಧರಿಸಿದನು. ಅವನ ರಾಜ್ಯದಲ್ಲಿ ಅಸುರೀ ವೃತ್ತಿಗೆ ಪೂರಕವಾದಂತಹ ಭೋಗಮಯ ವಿಚಾರಗಳನ್ನು ತೊಲಗಿಸಿ ಆ ಸ್ಥಾನದಲ್ಲಿ ತ್ಯಾಗದ ಭಾವನೆಯನ್ನು ಮೂಡಿಸಿ ಜನತೆಗೆ ದೈವೀ ವಿಚಾರಗಳನ್ನು ನೀಡಿ ಸುಖ ಹಾಗೂ ಸಮೃದ್ಧಿಯ ಜೀವನವನ್ನು ಪ್ರಧಾನಿಸಿದನು. ಈ ದಿನದಂದು ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವವನ್ನು ತಲುಪಿದ ಬಲಿಯ ಸ್ಮರಣೆಯನ್ನು ಮಾಡಬೇಕು. ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಕುಕರ್ಮಗಳು ಘಟಿಸುತ್ತಿರುತ್ತವೆ; ಆದರೆ ಜ್ಞಾನ ಹಾಗೂ ಈಶ್ವರೀಕೃಪೆಯಿಂದ ದೇವತ್ವವನ್ನು ತಲುಪಬಹುದು ಎಂಬುದು ಈ ಉದಾಹರಣೆಯಿಂದ ಕಂಡುಬರು ತ್ತದೆ. ಈ ರೀತಿ ನಿರ್ಭಯತೆಯಿಂದ ಸತ್ಕರ್ಮವನ್ನು ಪಾಲಿಸಿದರೆ ಅವನಿಗೆ ಮೃತ್ಯು ಭಯವು ಇರುವುದಿಲ್ಲ. ಯಮನು ಸಹ ಅವನ ಬಂಧು ಮಿತ್ರನಾಗುತ್ತಾನೆ. ಪಂಚಮಿಯ ಪೂಜೆ-ದೀಪಾವಳಿಯ ಸಮಾಪ್ತಿ ಕೊನೆಯಲ್ಲಿ ಮನಸ್ಸಿನಲ್ಲಿರುವ ಮಾಲಿನ್ಯ ದೂರವಾಗಿ ಚಿತ್ತ ಶುದ್ಧಿಯಾಯಿ ತೆಂದರೆ ಕೆಲವು ಕಡೆ ಪಂಚಮಿಯಂದು ಈ ದೀಪಾವಳಿಯನ್ನು ಸಮಾಪ್ತಿ ಮಾಡಲು ಪಂಚಮಿ ಪೂಜೆಯನ್ನು ಆಚರಿಸುತ್ತಾರೆ.

–>