-->

ಕನಾ೯ಟಕದ ಬಗ್ಗೆ ಎಷ್ಟು ಗೊತ್ತು ತಮಗ ? Karnataka Quiz - 50 Questions

ಕನಾ೯ಟಕದ ಬಗ್ಗೆ ಎಷ್ಟು ಗೊತ್ತು ತಮಗ ?

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?

2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು? 4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?

6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?

7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?

8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?

9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?

10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?

11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?

12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?

13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?

14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?

15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?

16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?

17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?

18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?

19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?

20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ
ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?

21) ರಾಯಚೂರಿನ ಮೊದಲ ಹೆಸರೇನು?

22) ಕನ್ನಡದ ಮೊದಲ ಕೃತಿ ಯಾವುದು?

23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.

24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?

25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?

26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?


27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?

28) ಮೈಸೂರು ಅರಮನೆಯ ಹೆಸರೇನು?

29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?

30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?

31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?

32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು? 
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?

34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?

35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?

36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?

37) ಕರ್ನಾಟಕದ ಮೊದಲ ಕವಯತ್ರಿ ಯಾರು?

38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?

39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?

40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?

41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?

42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?

43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?

44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?

45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?


46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-


47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?

48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?

49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?

50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?




*************************************************************************

1) ಮಲ್ಲಬೈರೆಗೌಡ.
2) ಟಿಪ್ಪು ಸುಲ್ತಾನ್.
3) ಚಿತ್ರದುರ್ಗ.
4) ಕೃಷ್ಣದೇವರಾಯ.
5) ಪಂಪಾನದಿ.
6) ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಹೈದರಾಲಿ.
8) ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕಲಾಸಿಪಾಳ್ಯ.
10) ಕೆಂಗಲ್ ಹನುಮಂತಯ್ಯ.
11) 8
12) "ಸರ್. ಮಿರ್ಜಾ ಇಸ್ಮಾಯಿಲ್"
13) ರಾಮಕೃಷ್ಣ ಹೆಗ್ಗಡೆ.
14) ದೇವನಹಳ್ಳಿ (ದೇವನದೊಡ್ಡಿ)
15) ವಿಜಯನಗರ ಸಾಮ್ರಾಜ್ಯ.
16) ತಿರುಮಲಯ್ಯ.
17) ಶ್ರೀರಂಗ ಪಟ್ಟಣದ ಕೋಟೆ.
18) ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಶಿರಸಿಯ ಮಾರಿಕಾಂಬ ಜಾತ್ರೆ.
20) ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ಮಾನ್ಯಖೇಟ.
22) ಕವಿರಾಜ ಮಾರ್ಗ
23) ಹಂಪೆ.
24) ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಲ್ ವಸಂತ್.
26) ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಮುಳ್ಳಯ್ಯನ ಗಿರಿ.
28) ಅಂಬಾವಿಲಾಸ ಅರಮನೆ.
29) ಬಾಬಾ ಬುಡನ್ ಸಾಹೇಬ.
30) ದಾವಣಗೆರೆ.
31) ಆಗುಂಬೆ.
32) ಬೆಂಗಳೂರು ನಗರ ಜಿಲ್ಲೆ.
33) ಹಲ್ಮಿಡಿ ಶಾಸನ.
34) ನೀಲಕಂಠ ಪಕ್ಷಿ.
35) ಕೆ.ಸಿ.ರೆಡ್ಡಿ.
36) ಶ್ರೀ ಜಯಚಾಮರಾಜ ಒಡೆಯರು.
37) ಅಕ್ಕಮಹಾದೇವಿ.
38) ವಡ್ಡರಾದನೆ.
39) ಮೈಸೂರು ವಿಶ್ವವಿಧ್ಯಾನಿಲಯ.
40) "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) ಪುರಂದರ ದಾಸರು.
42) ರಾಯಚೂರು ಜಿಲ್ಲೆ.
43) ರಾಮನಗರ.
44) ಮಂಡ್ಯ ಜಿಲ್ಲೆ.
45) ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ಗರಗ
48) ಕೊಡಗು.
49) ಲಿಂಗನಮಕ್ಕಿ ಅಣೆಕಟ್ಟು
50) ಕುವೆಂಪು.

SMS Jokes , funny text shares , Humour , Witty quotes , Greetings - Part 74

ಗಂಡ :ಪಕ್ಕದ ಮನೆಯಲ್ಲಿ ಹೊಸದಾಗಿ ಬಂದವರು ಕಾಂಗ್ರೆಸ್ ಅಲ್ಲ, ಆಮ್ ಆದ್ಮಿ 

ಹೆಂಡತಿ :ಅದು ಹೇಗೆ ನಿಮ್ಗೆ ಗೊತ್ತಾಯ್ತು? 

ಗಂಡ :ನಾನು ಕೈ ✋ಎತ್ತಿ ತೋರಿಸಿದಾಗ ಅವಳು ಪೊರಕೆ ಎತ್ತಿ ತೋರಿಸಿದಳು
Jokes , Fun , Haasya , Humor , Quotes , Greetings - Part 74

*********

ಗುಂಡ: ನಮ್ಮ P.W.D ಆಫೀಸ್ ಕ್ಲರ್ಕ್ ಸುಳ್ಳು ಲೆಕ್ಕ ಬರೆದು ಸಿಕ್ಕಾಕ್ಕೊಂಡು ಬಿಟ್ಟ.. 
ಗುಂಡನ ಗೆಳೆಯ: ಅದು ಹೇಗೆ...? 
ಗುಂಡ: ಆ ಕ್ಲರ್ಕ್ ರೋಡ್ ರೋಲರ್ ಪಂಚರ್ ಆಗಿದೆ ಅಂತ ಬರೆದಿದ್ದ....!!!!

***************

ಆಟೋ ಡ್ರೈವರ್ : ಸಾರಿ ಸಾರ್...... ಮೀಟರ್ ಹಾಕೋದು ಮರೆತೇ ಬಿಟ್ಟೆ...... 
ಗುಂಡ : ಪರವಾಗಿಲ್ಲ ಬಿಡಿ.... ನಾನೂ ಕೂಡ ಪರ್ಸ್ ತರೋದು ಮರೆತೇಬಿಟ್ಟೆ !!!
***************

ಟೀಚರ್ : ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ? 
ಸ್ಟೂಡೆಂಟ್ : ಯಾಕಾಗಲ್ಲ ಟೀಚರ್ ? ಚಿಕ್ಕವಯಸ್ಸಿನಲ್ಲಿ ಬಗ್ಗದ ನಮ್ಮ ಅಜ್ಜ ಈಗ ತುಂಬಾ ಬಗ್ಗಿದ್ದಾರೆ !!!

******************************

ಮೊಮ್ಮಗ : ಅಜ್ಜ, ನಿಮ್ಮ ಪೆನ್ಷನ್ನಿಂದ ನಂಗೆ 500 ರೂ. ಸಾಲ ಕೊಡಿ ಅಜ್ಜಾ...... 
ಅಜ್ಜ : ಯಾವಾಗ ವಾಪಸ್ ಕೊಡುತ್ತೀ ? 
ಮೊಮ್ಮಗ : ನಂಗೆ ಪೆನ್ಷನ್ ಬರುವಾಗ !
***************

ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ? 
ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ? 
ಗುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?
***************

ಮಗ : ಅಪ್ಪಾ ಇಲ್ಲಿ ಬಾ....
ಅಮ್ಮ : ಮಗೂ ಅಪ್ಪನನ್ನ ಹಾಗೆಲ್ಲಾ ಕರೆಯಬಾರದು. ಮರ್ಯಾದೆಯಿಂದ ಕರೆಯಬೇಕು ತಿಳೀತಾ ? 
ಮಗ : ಅಪ್ಪಾ..... ಮರ್ಯಾದೆಯಿಂದ ಇಲ್ಲಿ ಬಾ !!!
***************

ಇರುವೆಗೆ ಹಾಕೋ ಪೌಡರ್
ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ 
ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ
***************

ಸರ್ದಾರ್ ; ನಾನು ಒಳಗೆ ಬರಬಹುದ ಸರ್
ಆಫೀಸರ್ ; wait ಪ್ಲೀಸ್
ಸರ್ದಾರ್ ; 75 kg ಸರ್

***************

ಕೆಂಪು ಗುಲಾಬಿ ಕೊಟ್ಟು ಅವನು ಹೇಳಿದ "ನಾ ನಿನ್ನ ಪ್ರಿಯತಮ" 
ಅದಕ್ಕೆ ಅವಳು ಕೆಂಪು ರಾಖಿ ಕಟ್ಟಿ ಹೇಳಿದಳು "ನೀ ನನ್ನ ಪ್ರಿಯ ತಮ್ಮ"
***************

ಕಾಫಿ ಬಾರ್  ಮತ್ತು ವೈನ್ ಬಾರ್ಗೂ ಏನ್ ವ್ಯತ್ಯಾಸ ?
ಎಲ್ಲಾ ಪ್ರೀತಿಗಳು ಕಾಫಿ ಬಾರ್ನಲ್ಲಿ ಪ್ರಾರಂಭವಾಗಿ ವೈನ್ ಬಾರ್ನಲ್ಲಿ ಮುಕ್ತಾಯವಾಗುತ್ತದೆ !!! 
***************

ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:
ಕುಡುಕ: ಬಾಡಿಗೆ ಎಷ್ಟಾಯ್ತು ?
ಡ್ರೈವರ್: ಇಪ್ಪತ್ತು ರೂಪಾಯಿ
ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.
ಡ್ರೈವರ್: ಇದು ಹತ್ತು ರೂಪಾಯಿ
ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ 
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ??? 
***************

 ಸಂತಾ ಮೊತ್ತಮೊದಲ ಬಾರಿಗೆ ಕಳ್ಳತನ ಮಾಡಲು ಹೋದ
ಕನ್ನ ಹಾಕಿ ಒಳ ನುಗ್ಗಿದ್ದೇ ಮನೆಯೊಡೆಯನಿಗೆ ಎಚ್ಚರವಾಯಿತು. 'ಯಾರು ?' ಎಂದು ಕೇಳಿದ
'ಮಿಯಾಂವ್' ಎಂದ ಸಂತಾ
'ಯಾರು ?' ಎಂದು ಇನ್ನೂ ಗಟ್ಟಿಯಾಗಿ ಕೇಳಿದ ಯಜಮಾನ.
'ಮಿಯಾಂವ್ ಮಿಯಾಂವ್' ಎಂದ ಸಂತಾ. !
'ಯಾರು..... ಹೇಳಿ ? ' ಎಂದ ಯಜಮಾನ ಇನ್ನೂ ಗಟ್ಟಿಸ್ವರದಲ್ಲಿ
'ಬೆಕ್ಕು.... ಬೆಕ್ಕು' ಎಂದ ಸಂತಾ ಮೆಲುದನಿಯಲ್ಲಿ !!
***************

ಸಂತಾ: ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ.
ನಾನು ಅವಳಿಗೆ I LOVE U ಅಂತ ಹೇಳಿದ್ರೆ, 
ಅವಳು ಹೇಳಿದಳು ...I LOVE U 2 ಅಂತ.
ಆದ್ರೆ ಇನ್ನೊಬ್ಬ ಯಾರು ಅಂತ ಗೊತ್ತಾಗ್ಲಿಲ್ಲ.....!!!!
***************

ನಾರದ ಹೇಳಿದ : ನಿಮ್ಮ ಪ್ರೇಯಸಿ ನಿಮಗೆ ರೋಮ್ಯಾಂಟಿಕ್ ಮೆಸೇಜ್ ಕಳಿಸಿದ್ರೆ ಖುಷಿಪಡಿ. 
ಆದರೆ,
.
.
ಒಮ್ಮೆ ಯೋಚಿಸಿ ಆ ಮೆಸೇಜ್‍ನ್ನು ನಿಮ್ಮ ಪ್ರೇಯಸಿಗೆ ಯಾರು ಕಳಿಸಿದ್ದು ಎಂದು ???
ನನ್ನ ಕೆಲಸ ಮುಗಿಯಿತು.... ನಾರಾಯಣ...... ನಾರಾಯಣ !!!
***************

ಸರದಾರ್ ಜೂಸ್ ಬಾಟಲನ್ನೆ ಬಹಳ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇದ್ದದ್ದನ್ನು ಕಂಡು ಮತ್ತೊಬ್ಬ ಯಾಕೆಂದು ಕೇಳಿದ.ಅದಕ್ಕೆ ಸರ್ದಾರ್ ಹೇಳಿದ `ಅದರಮೇಲೆ CONCENTRATE ಅಂತ ಬರೆದಿದೆ?`
***************

ನ್ಯಾಯಾಧೀಶ: ಹೋಗೀ ಹೋಗೀ ದೇವಸ್ಥಾನಕ್ಕೇ ಕನ್ನ ಹಾಕಿದ್ಯಲ್ಲಯ್ಯಾ? 
ಕಳ್ಳ: ಅಂಗಲ್ಲ ಸಾಮೀ, ಯಾವ್ದಾದ್ರೂ ಕೆಲ್ಸ ಸುರು ಮಾಡೋವಾಗ ದೇವ್ರಿಂದಾ ತಾನೇ ಸುರುಅಚ್ಕೋಬೇಕೂ?

*********

Speaking Lips can Reduce
Many Problems..

Closed Lips can Avoid 
Some Problems..
           But,
Smiling Lips can Solve 
Almost All Problems..!!
So keep Smiling..! 

*********

Darkest time of day is a minute before Sunrise..
 
So when u feel u r at Darkest 
moment in life.. 
Remember that.. 
Sunrise is just a Minute Away!!

*********

!⚡! Outside an Electricity Board Office, One 🍌Banana vendor was selling Bananas.
    
EB  officer: What's the price of Banana?

Vendor - Let me know where you will use it?

Manager -  What do you mean?

Vendor- If you are taking it to temple then it's  Rs 10 per kg.

For School children Rs 20 per kg
          
If you are taking home Rs 25 per kg 

And for Restaurant Rs 30 per kg.....

EB officer- How can this be? All bananas are same then why difference in price?
 
Vendor - This is my tariff plan. 
கொய்யாலே.....You people give electricity to home, shop, factory etc from the same pole.  But you charge different tariffs with slab..😳
     
Banana vendor rocked and 
EB officer shocked. 😉

*********

Decisions not acted upon
within 48 hours
never get executed.
Progress = Decisions followed
by immediate Action.
P = D + A

*********

A disciple asked his Guru- "Is there a 'Soul' in our body,? Will it not 'perish' like the body.?"

The Guru explained..

"Milk" is useful but if left as it is.. it gets spoiled..

In case u add a drop a "Buttermilk".. it becomes "Curd".. and the Milk that turns to Curd, remains for one more day without getting spoiled..

If left as it is.. the Curd gets spoiled..

Yet, if u churn the "Curd" it becomes "Butter" which doesn't get spoiled..

But, even Butter also does not remain fresh for many days.. It becomes rancid or spoiled after a few days..

But if u melt Butter in a proper manner.. It becomes pure "Ghee", which never gets spoiled..

Now, do u see that the "Milk" which gets spoiled contains "Ghee" that never gets spoiled.?

Likewise, inside the "perishable" Body, there is an "imperishable" Soul..

Sankirtan, (niskaam) Seva & Sadhana..
makes the "perishable Body"..
to be one with "imperishable Soul"..

Human Body is the milk..
Sankirtan is the buttermilk..
(Niskaam) Seva is the churning..
& then by Sadhana we melt the 'reformed body' to be one with the 'soul'..

*********

ಚಕ್ರಿಣೋ ದಶಮೀಸ್ಥಸ್ಯ ರೋಗಿಣೋ ಭಾರಿಣಃ ಸ್ತ್ರಿಯಾಃ | 
ಸ್ನಾತಕಸ್ಯ ಚ ರಾಜ್ಞಶ್ಚ ಪಂಥಾ ದೇಯೋ ವರಸ್ಯ ಚ ||

ರಸ್ತೆಯಲ್ಲಿ ಒಂದು ಅಂಬುಲೆನ್ಸ್ ಬರುತ್ತಿದ್ದರೆ ಅದಕ್ಕೆ ದಾರಿ ಮಾಡಿಕೊಡಬೇಕು; ಒಂದೋ ವೇಗ ತಗ್ಗಿಸಿ, ಇಲ್ಲವೇ ಗಾಡಿಯನ್ನು ತುಸು ಹೊತ್ತು ನಿಲ್ಲಿಸಿ ಅಂಬುಲೆನ್ಸ್ ಗಾಡಿ ಹೋಗಲು ಅನುವು ಮಾಡಬೇಕು - ಇದು ನಾಗರಿಕ ಪ್ರಜ್ಞೆ. ಕೆಲವರಿಗೆ ಇದು ಹುಟ್ಟಿನಿಂದಲೇ ಬರುತ್ತದೆ. ಇನ್ನು ಕೆಲವರಿಗೆ ಕಾಯ್ದೆ, ಕಾನೂನು ಮಾಡಿ, ದಂಡ ವಸೂಲು ಮಾಡಿ, ಕೆಲವೊಮ್ಮೆ ಶಿಕ್ಷೆಯನ್ನೂ ಕೊಟ್ಟು ಹೇಳಿಕೊಡಬೇಕಾಗುತ್ತದೆ. 

ಹಿಂದಿನ ಕಾಲದಲ್ಲೂ ಈ ನೀತಿಸಂಹಿತೆ ಬೇರೆ ವಿಧಗಳಲ್ಲಿ ಜಾರಿಯಲ್ಲಿತ್ತು. ನೀವು ರಸ್ತೆಯಲ್ಲಿ ಕುದುರೆ ಬಂಡಿಯೋ, ಎತ್ತಿನ ಗಾಡಿಯೋ ಹೊಡೆದುಕೊಂಡು ಹೋಗುತ್ತಿದ್ದೀರಿ. ಎದುರಿಂದ ಯಾರು ಬಂದರೆ ಅವರಿಗೆ ಜಾಗ ಕೊಡಬೇಕು? ಯಾರು ನಿಮ್ಮ ಪ್ರಯಾರಿಟಿ? ಇಂಥ ಸಂಶಯದ ಪರಿಹಾರಕ್ಕೆ ಇಲ್ಲೊಂದು ಪಟ್ಟಿ ಇದೆ ನೋಡಿ: ವೃದ್ಧ, ರೋಗಿ, ಬೆನ್ನ ಮೇಲೆಯೋ ತಲೆ ಮೇಲೋ ಮಣಭಾರದ ಹೊರೆ ಹೊತ್ತಿರುವವನು, ಮದುವೆಗಾಗಿ ಹೊರಟಿರುವ ದಿಬ್ಬಣ, ರಾಜ,
ವಿದ್ಯಾರ್ಥಿ ಮತ್ತು ಸ್ತ್ರೀ - ಈ ಏಳು ಮಂದಿಗೆ ಯಾರೇ ಆಗಲಿ ದಾರಿ ಬಿಟ್ಟುಕೊಟ್ಟು ಸಹಕರಿಸಬೇಕು. 

ವೃದ್ಧ - ಕಾರಣ ಬೇಕಿಲ್ಲ. ಆತನಿಗೆ ನಡೆದಾಡುವುದೂ ಕಷ್ಟವಾಗಿರುವಾಗ ಮಾನವೀಯತೆ ತೋರಿಸುವುದು ನಿಮ್ಮ ಧರ್ಮ. ಅವನನ್ನು ಓವರ್ ಟೇಕ್ ಮಾಡಿ ನಿಮಗೇನೂ ಸಾಧಿಸಬೇಕಾಗಿಲ್ಲ. ತಾತಾ, ನೀವು ಮುಂದೆ ಹೋಗಿ ಎಂದು ಅವರಿಗೆ ದಾರಿ ಬಿಟ್ಟು ಕೊಡಿ. 

ಎರಡನೆಯದಾಗಿ, ರೋಗಿ. ಇವನಿಗೆ ದಾರಿ ಬಿಟ್ಟುಕೊಡದವರು ಯಾರು? ಇಲ್ಲಿ, ರೋಗಿ ಎಂದಾಗ, ಅಪಘಾತ ಅಥವಾ ಯಾವುದಾದರೂ ಅನಾಹುತವಾಗಿ ಜೀವನ್ಮರಣ ಸ್ಥಿತಿಯಲ್ಲಿರುವವನು ಎಂದೂ ಅರ್ಥ ಮಾಡಿಕೊಳ್ಳಬೇಕು. ತುರ್ತಾದ ನೆರವು ಬೇಕಿರುವುದರಿಂದ, ಅವನಿಗೆ ದಾರಿ ಬಿಟ್ಟು ಕೊಡಲೇಬೇಕಾದ್ದು ನಿಮ್ಮ ಧರ್ಮ. 

ಮೂರನೆಯದಾಗಿ, ಹೊರೆ ಹೊತ್ತವನು. ಪಾಪ, ಅವನ ಕಷ್ಟ ಅವನಿಗೇ ಗೊತ್ತು. ಅಂಥವನು ಎದುರಾದಾಗ, ವಿನಯದಿಂದ ಬದಿಗೆ ನಿಂತು ದಾರಿ ಮಾಡಿಕೊಡಬೇಕೇ ಹೊರತು ಅಡ್ಡ ನಿಂತು ದರ್ಪ ತೋರಿಸಲು ಹೋಗಬೇಡಿ.

ಮದುವೆಗಾಗಿ ಹೊರಟಿರುವ ದಿಬ್ಬಣ, ವರ, ವಧು: ಹೌದು, ಹಳೆಯ ಕಾಲದಲ್ಲಿ ಇಂಥ ದಿಬ್ಬಣಗಳು ರಸ್ತೆಯಲ್ಲೇ ನಡೆದು ಹೋಗುತ್ತಿದ್ದವು. ಹೊಸ ಬದುಕಿಗೆ ಕಾಲಿಡುವವರ ಸಂಭ್ರಮಕ್ಕೆ ಚ್ಯುತಿ ತರದಂತೆ ವರ್ತಿಸುವುದು ಸಾತ್ವಿಕ ಲಕ್ಷಣ. ಅವರಿಗೆ ದಾರಿ ಬಿಟ್ಟರೆ ನೀವು ಕಳೆದುಕೊಳ್ಳುವುದು ಏನೂ ಇಲ್ಲ.

ರಾಜ... ಇವನಿಗೆ ದಾರಿ ಬಿಟ್ಟುಕೊಡದವರು ಯಾರು! ಹಿಂದಿನ ಕಾಲದಲ್ಲಿ, ಈಗಿನಂತೆ ಬೇಕೆಂದಾಗೆಲ್ಲ ಗೂಟದ ಕಾರಿನಲ್ಲಿ ಊರು ತುಂಬ ಓಡಾಡಿಕೊಂಡು ಪುರಜನರ ಓಡಾಟಕ್ಕೆ ತೊಂದರೆ ಮಾಡುವ ಕ್ರಮ ಇರಲಿಲ್ಲ. ರಾಜ ಅತ್ಯಗತ್ಯವಿದ್ದರೆ ಮಾತ್ರ ರಸ್ತೆಯಲ್ಲಿ ಓಡಾಡುತ್ತಿದ್ದ. ಹಾಗಾಗಿ, ಅವನ ಓಡಾಟಕ್ಕೆ ಅನುಕೂಲ ಮಾಡಿಕೊಡುವುದು ಪ್ರಜೆಗಳ ಕರ್ತವ್ಯವಾಗಿತ್ತು.

ಹಾಗೆಯೇ, ವಿದ್ಯಾರ್ಥಿಗೂ ದಾರಿ ಬಿಟ್ಟುಕೊಡಿ. ಅವನು ವಿದ್ಯಾವಂತ; ಓದಿಕೊಂಡವನು; ಪ್ರಾಜ್ಞ ಎಂಬುದು ಒಂದು ಕಾರಣ. ಈಗಿನ ಕಾಲವಾದರೆ, ಪಾಪ ಯಾವ ಎಕ್ಸಾಮಿಗೆ ಹೋಗುತ್ತಿದ್ದಾನೋ, ತರಗತಿಗಳಿಗೆ ಹೊರಟಿದ್ದಾನೋ ಏನೋ ಎನ್ನಬಹುದು. ಹಾಗಾಗಿ, ಅವನಿಗೆ ತೊಂದರೆ ಮಾಡಬಾರದೆಂಬ ಭೂತದಯೆ ನಿಮ್ಮಲ್ಲಿರಲಿ. 

ಯಾರಿಗೆಲ್ಲ ದಾರಿ ಬಿಡಬೇಕೆಂಬ ಪಟ್ಟಿಯಲ್ಲಿ ಇನ್ನೊಂದು ಹೆಸರು : ಸ್ತ್ರೀ. ಈಕೆ ಯಾವ ವಯಸ್ಸಿನವಳಾದರೂ, ಯಾವ ಕೆಲಸಕ್ಕೆ ಹೊರಟಿದ್ದರೂ, ಯಾವ ಕುಲಗೋತ್ರಗಳಿಗೆ ಸೇರಿದವಳಾಗಿದ್ದರೂ ಮೊದಲು ದಾರಿ ಬಿಟ್ಟುಕೊಡುವುದು ಉಳಿದವರ ಕರ್ತವ್ಯ. ಬಹುಶಃ ಇಲ್ಲಿಂದಲೇ ಲೇಡೀಸ್ ಫಸ್ಟ್ ಎಂಬ ಮಾತು ಬಂದಿರಬೇಕು, ಯಾರಿಗೆ ಗೊತ್ತು!

ಅಂದಹಾಗೆ, ಈ ಶ್ಲೋಕ ನಿಮಗೆ ಸಿಗುವುದು #ಮನುಸ್ಮೃತಿ ಯಲ್ಲಿ

*********

Fantastic lesson in English grammer

Teacher:
1) he washed utensils
2) he was made to wash utensils

What's the difference between these two sentences?








Student:
In 1st sentence the subject is unmarried and in second subject is married.

Teacher gave 100% marks to student😂😂😂😂

*********

This is one of the sweet and best message I received so like to share with you     
1. No matter how beautiful and handsome you are, just remember Baboon and Gorillas also attract tourists.
***Stop Boasting.

2. No matter how big and strong you are, you will not carry yourself to your Grave.
***Be Humble! 

3. No matter how tall you are, you can never see tomorrow.
***Be Patient! 

4. No matter how Light Skinned you are, you will always need light in Darkness.
***Take Caution! 

5. No matter how Rich and many Cars you have, you will always walk to Bed.
***Be Contented! 

Take Life Easy 
 Life is "Exp. + Exp. + Exp."
Yesterday was Experience.
Today is Experiment.
Tomorrow is Expectation.
So, use your Experience in your Experiment to achieve your Expectations.

*********

A man was sitting reading his papers when his wife hit him round the Head with a frying pan.

'What was that for?' the man asked.

The wife replied 'That was for the piece of paper with the name Jenny on it that I found in your pants pocket'.

The man then said 'When I was at the races last week Jenny was the name of the horse I bet on'

The wife apologized and went on with the housework.

Three days later the man is watching TV when his wife bashes him on the head with an even bigger frying pan, knocking him unconscious.

Upon re-gaining consciousness the man asked why she had hit again.

Wife replied. 'Your horse phoned'

*********

"ಪಕ್ಷಿ ಜೀವಂತವಾಗಿದ್ದಾಗ ಅದು ಇರುವೆಗಳನ್ನು ತಿನ್ನುತ್ತದೆ.., 
ಪಕ್ಷಿ ಸತ್ತಾಗ ಇರುವೆಗಳು ಪಕ್ಷಿಯನ್ನು ತಿನ್ನುತ್ತವೆ..!!! 
ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುತ್ತವೆ..

 ಹಾಗಾಗಿ ಜೀವನದಲ್ಲಿ ಯಾರನ್ನೂ, ಅಥವಾ ಯಾರ  ಭಾವನೆಗಳನ್ನು ಹೀಯಾಳಿಸಿ ಅಪಮೌಲ್ಯಗೊಳಿಸಬೇಡಿ.. ಜರಿದು ಮನನೋಯಿಸಬೇಡಿ..

 ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ "ಕಾಲ" ನಿಮಗಿಂತಲೂ ಹೆಚ್ಚು ಶಕ್ತಿಶಾಲಿ..!! ಒಂದು ಮರ ಕೋಟ್ಯಂತರ. ಬೆಂಕಿಕಡ್ಡಿಗಳನ್ನು ತಯಾರುಮಾಡಬಹುದು..,

   ಆದರೆ ಒಂದು ಬೆಂಕಿಕಡ್ಡಿ ಕೋಟ್ಯಂತರ ಮರಗಳನ್ನೇ ಸುಟ್ಟುಹಾಕುತ್ತದೆ. !!!! 

ಆದ್ದರಿಂದ
" ಒಳ್ಳೆಯವರಾಗಿರಿ
     ಒಳ್ಳೆಯದನ್ನೇ ಚಿಂತಿಸಿ
       ಒಳ್ಳೆಯ ಕಾರ್ಯಗಳನ್ನೆ     
        ಮಾಡಿ...
         ಮೌಲ್ಯಯುತವಾಗಿ 
           ಜೀವಿಸೋಣ "

*********

ಒಂದು ಊರಿನಲ್ಲಿ 3 ಮಹಿಳೆಯರು ನೀರು ತುಂಬಿಸುತ್ತಿದ್ದರು.

ಮೊದಲನೆಯವಳ ಮಗ ಶಾಲೆಯಿಂದ ಅದೇ ದಾರಿಯಲ್ಲಿ ಹೋಗುತ್ತಿರುವಾಗ ತಾಯಿಯ ಕಡರ ನೋಡಿದ . ಆವಾಗ ತಾಯಿ" ಅವನೆ ನನ್ನ ಮಗ,ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾನೆ" 

ಸ್ವಲ್ಪ ಸಮಯದ ನಂತರ ಎರಡನೆಯವಳ ಮಗ ಅದೇ ದಾರಿಯಿಂದ ಶಾಲೆಯಿಂದ ಹಿಂತಿರುಗುವುದನ್ನು ತೋರಿಸಿ "ಅವನೆ ನನ್ನ ಮಗ, ಸಿಬಿಎಸ್ಇನಲ್ಲಿ ಒದುತ್ತಿದ್ದಾನೆ"

ಅವನ ಹಿಂದಿನಿಂದ ಮೂರನೆಯವಳ ಮಗ ಕೂಡಾ ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ.ತಾಯಿಯನ್ನು ನೋಡಿ ಅವಳ ಹತ್ತಿರ ಬಂದು ನೀರಿನಿಂದ ತುಂಬಿದ ಕೊಡವನ್ನು ಹೆಗಲ ಮೇಲೆ ಮತ್ತು ಬ್ಯಾಗನ್ನು ಇನ್ನೊಂದು ಕೈಯಲ್ಲಿ ಹಿಡಿದು ತಾಯಿಯ ಕಡೆ ನೋಡಿ" ಅಮ್ಮ ಬನ್ನಿ ಮನೆಗೆ ಹೋಗುವ" ಅಂದ.

ತಾಯಿ ಅವನ ಕಡೆ ಕೈ ತೋರಿಸಿ, ಸಂತೋಷದಿಂದ " ಇವನೇ ನನ್ನ ಮಗ, ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾನೆ" ಅಂದಳು. ಇದನ್ನು ಕೇಳಿ ಮತ್ತಿಬ್ಬರು ನಾಚಿಕೆಯಿಂದ ತಲೆ ಬಾಗಿಸಿದರು.

ಮೇಲಿನ ಕತೆಯ ತಾತ್ಪರ್ಯ  ಇಷ್ಟೆ, "ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ.........!!
ಮಕ್ಕಳು ಎಲ್ಲಾದರು ಓದಲಿ ಮೊದಲು ನೆಲ, ಜಲ, ಧರ್ಮ ,ತಂದೆ ತಾಯಿ ಯಾರಲ್ಲಿ ಗೌರವ,ಮತ್ತು ರಾಷ್ಟ್ರಾಭಿಮಾನವನ್ನು ನಾವು ಮಕ್ಕಳಿಗೆ ಮೊದಲು ಕಲಿಸಬೇಕು. ತಾಯಿಯೇ ಮೊದಲ ಪಾಠ ಶಾಲೆಯದ್ದರಿಂದ ಇವೆಲ್ಲವೂ ಅವಳ ಜವಾಬ್ದಾರಿ. ಕಲಿಯುವುದು ಮಕ್ಕಳ ಜವಾಬ್ದಾರಿ.

ಸರಿ ಅನಿಸಿದರೆ ಬೇರೆ ಗ್ರೂಪ್ ಗಳಿಗೆ ಕಳಿಸಿ.

*********

Money Says Earn Me
Calendar Says Turn Me
Time Says Plan Me
Future Says Win Me
Beauty Says Love Me
But God Simply Says..
Work Hard And Trust Me...! 

*********


SMS Jokes , funny text shares , Humour , Witty quotes , Greetings - Part 73

Jokes , Fun , Haasya , Humor , Quotes , Greetings - Part 73PASHA bhai's one leg had turned blue..
He went to the doctor..

Doctor: "poison has spread pasha bhai. The leg needs to be amputated.."

Operation took place and pasha bhai's one leg was removed.

After few days, another leg turned blue.

Doctor: "poison has widely spread. We need to amputate this leg too.."

Now pasha bhai had two artificial legs fixed.

After few days, artificial leg turned blue too..

Doctor: now I understand your problem. Pasha bhai, your lungi was leaving color...😁😂😝

*********

Since cricket fever is on, Try to answer this if u are a real cricket buff........... using minimum number of clues...!

Clue no: 1 - In a Historic match between India and England , he served as the captain of the team.....
.
.
.
.
.
..
.
.
.
.
.
.
.
.
..
.
.
.
.
.
.
Clue no: 2 - He was the Opening bowler in that match......
.
.
.
.
.
..
.
.
.
.
.
.
.
.
.
.
.
.
.
.
Clue no: 3 - He was also the Opening batsman in that match....
.
.
.
.
.
.
.
.
.
.
.
.
.
.
.
.
..
.
.
.
Clue no: 4 - He is the one who bowled the last ball of the
innings....
.
.
.
.
.
.
..
.
.
.
.
.
.
.
.
.
.
.
.
Clue no: 5 - He was the one, who faced the last ball of the
innings....
.
.
.
.
.
.
.
.
.
.
.
.
.
.
Still u didn't get it...... ooops.....
.
.
.
.
.
.
.
.
.
Clue no: 6 - He took the last wicket of the innings......
.
.
..
.
.
.
.
.
.
.
.
.
.
.
.
.
Clue no: 7 - He was named the man of the match in that particular game....
.
.
.
.
.
.
.
.
.
.
.
.
.
.
Okay atleast after this easy one
.
.
.
.
.
.
.
.
.
.
Clue no: 8 - He won the match for his team by hitting a sixer off the
last ball........ Who is HE???
.
.
.
.
.
.
. Clue no: 9 - He was the captain in his debut match
.
.
.
.
.
.
.
.
.
Not yet??!!!
.
.
..
.
.
.
.
.
.
.
..
.
..
Okay Let us see the answer....
.
.
.

.
.
.
.
.
.
.
It is..........
.
.
.
.
.
.
.
.
.
.
.
.
.
.
.
.
.
.
.
.
.
.
.


.

.

.
.

.

.

.

.
Aamir Khan in Lagaan
I am also searching for the guy who sent me this...
😁😁😁

*********

★ಇದು ಕಥೆಯಲ್ಲ ಜೀವನ★

1." ನೀವೇನನ್ನು ಬಯಸುತ್ತೀರೋ 
ಅದನ್ನು ಪಡೆಯಲಾರಿರಿ. ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ. ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ. ಯಾವುದು ಶಾಶ್ವತವೋ ಅದು ಬೇಸರ.
ಅದೇ ಬದುಕು"...
      
2. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು. ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..
    
3. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ 
ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ ನಿಮಗೆ ಅತ್ಯಂತ ಖುಷಿಯೆನಿಸುವದು.
ಅದು ಯಾವುದೆಂದರೆ ಬೇರೆಯವರ
ಕಣ್ಣುಗಳಲಿ ನೀವು ಕಾಣುವ ನಿಮ್ಮ ಬಗೆಗಿನ ಕಾಳಜಿ"...
      
4. "ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ ಬದುಕುಳಿಯುವದು. ಆದರೆ ಅದು ಪ್ರತಿದಿನ ಅತ್ಯಂತ ಸಂತೋಷದಿಂದ ಹಾರಾಡುವದು ಮತ್ತು ಹಲವರ ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ ಪ್ರಮುಖ. ಯಾವಾಗಲೂ ಸುಖ ಸಂತೋಷದಿಂದಿರಿ"...
     
5. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ ಸಂತೆ.ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"...
     

6. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ ತೋರುವ ಯಾರನ್ನು ನೋಯಿಸಬೇಡಿ"...
       
7. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು  ರೂಪಿಸಲಾರದು. ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"...
      
8. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು? 
ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ ಸಮಯ ಎಂದಿರುವದಿಲ್ಲ"...

*********

ಮೊನ್ನೆ ಧೋನಿ ಬಳಗ ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ಜಯ ಸಾಧಿಸಿದಾಗ 
ಬಾಲ್ಯದಲ್ಲಿ ಶಾಲಾ ಮಾಸ್ತರು ಹೇಳಿದ ಜೀವನದ ಸತ್ಯ ಹೇಳುವ ಅರ್ಥಗರ್ಭಿತ ಕಥೆ ನೆನಪಿಗೆ ಬಂತು. ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಓದಿ ನಿಮಗೂ ಇಷ್ಟ ಆಗಬಹುದು.


ಮರಳುಗಾಡಿನಲ್ಲಿ ತನ್ನ ಗೆಳೆಯರ ಗೊಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ. ಅಲೆದು ಅಲೆದು ಸುಸ್ತಾದ. ಆತನ ಬಳಿ ಇದ್ದ ಕ್ಯಾನ್ ಗಳಲ್ಲಿ ನೀರೂ ಖಾಲಿ ಆಗಿತ್ತು. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದ. ಕೆಳಗೆ ಮರಳು ಕಾದ ಕೆಂಡವಾಗಿತ್ತು ನಡೆದು
ನಡೆದು ಮೈಯಿಂದ ಬೆವರು ಇಳಿದು ಆ ವ್ಯಕ್ತಿ ನಿತ್ರಾಣನಾದ. ಇನ್ನು ತನಗೆ ನೀರು ಸಿಗದಿದ್ದರೆ ತನ್ನ ಜೀವ ಹೋಗುವುದು ಖಚಿತ ಎಂಬುದನ್ನು ಮನಗಂಡ. ಕೊನೆ ಉಸಿರಿರುವ ತನಕ ದಾರಿ ಹುಡುಕುವ ಛಲದಿಂದ ದೇವರ ಮೇಲೆ ಭಾರ ಹಾಕಿ ಮನಸ್ಸಿಗೆ ಸರಿ ಎನಿಸಿದ ದಿಕ್ಕಿನತ್ತ ಹೆಜ್ಜೆ ಹಾಕಿದ. ಸ್ವಲ್ಪ ದೂರ ನಡೆದ ಮೇಲೆ ಅವನಿಗೆ ಅಲ್ಲಿ ಒಂದು ಪಾಳು ಮನೆ ಕಾಣಿಸಿತು. ಈ ಮನೆಯಲ್ಲಿ ತನಗೆ ನೀರು ಸಿಗಬಹುದು ಎಂಬ ನಿರೀಕ್ಷೆಯಿಂದ ಅತ್ತ ಹೆಜ್ಜೆ
ಹಾಕಿದ. ನೀರು, ಆಹಾರ ಇಲ್ಲದೆ ನಿತ್ರಾಣನಾಗಿದ್ದ ಅವನಿಗೆ ಅಷ್ಟು ದೂರ ನಡೆಯುವ ಶಕ್ತಿಯೂ ಇಲ್ಲದಾಗಿತ್ತು. ಸುಸ್ತಾಗಿ ಕುಸಿದು ಬಿದ್ದ, ಆದರೂ ಕೊನೆಯ ಆಸರೆ ಆ ಪಾಳು ಮನೆಯಲ್ಲಿ ಸಿಕ್ಕೀತು ಎಂದು ತೆವಳುತ್ತಾ ಸಾಗಿದ. ಕಷ್ಟ ಪಟ್ಟು ಆ ಮನೆಯ ಮುರಿದ ಬಾಗಿಲು ತಳ್ಳಿ ಒಳಹೋದ. ಕಾದ ನೆಲ, ಸುಡುತ್ತಿದ್ದ ಸೂರ್ಯನಿಂದಂತೂ ಮುಕ್ತಿ ದೊರಕಿತು. ಒಳ ಹೋದ ಆ ವ್ಯಕ್ತಿ ತನಗೆ ಕುಡಿಯಲು ನೀರು ಸಿಗುತ್ತದೆಯೇ ಎಂದು ಹುಡುಕಾಡಿದ. 
ಅಲ್ಲಿ ಒಂದು ನೀರೆತ್ತುವ ಯಂತ್ರ ಇತ್ತು, ಆ ಯಂತ್ರಕ್ಕೆ ಪೈಪ್ ಜೋಡಿಸಲಾಗಿತ್ತು. ಪಂಪ್ ತಿರುಗಲು ಚಕ್ರವನ್ನೂ ಅಳವಡಿಸಲಾಗಿತ್ತು. ಚಕ್ರ ತಿರುಗಿಸಲು ಹ್ಯಾಂಡಲ್ ಹಾಕಲಾಗಿತ್ತು. ಇದನ್ನು ನೋಡಿದ ವ್ಯಕ್ತಿ ನೀರಿಗಾಗಿ ಹ್ಯಾಂಡಲ್ ತಿರುಗಿಸಿದ. ಚಕ್ರ ತಿರುಗಿತು, ಮೋಟರ್ ಸಹ ತಿರುಗಿತಾದರೂ ಪೈಪ್ ನಿಂದ ನೀರು ಬರಲಿಲ್ಲ. ಚಕ್ರ ತಿರುಗಿಸಿ ತಿರುಗಿಸಿ ಸುಸ್ತಾದ ವ್ಯಕ್ತಿ. ಬೇರೆಲ್ಲಾದರೂ ನೀರು ಸಿಗುವುದೇ ಎಂದು ಹುಡುಕಿದ. ಆ
ಪಾಳು ಮನೆಯ ಮೂಲೆಯಲ್ಲಿ ಒಂದು ಬಾಟಲಿ ಇತ್ತು. ಅದರಲ್ಲಿದ್ದ ನೀರು ಆವಿ ಆಗದಂತೆ ಮುಚ್ಚಳ ಹಾಕಲಾಗಿತ್ತು. ಸದ್ಯ ಬದುಕಿದೆಯಾ ಬಡಜೀವ ಎಂದು ನೀರು ಕುಡಿಯಲು ಆ ಬಾಟಲ್ ಮುಚ್ಚಳ ತೆಗೆದ, ಇನ್ನೇನು ನೀರು ಕುಡಿಯಬೇಕು ಎನ್ನುವಾಗ, ಬಾಟಲಿ ಮೇಲೆ ಅಂಟಿಸಲಾಗಿದ್ದ ಚೀಟಿ ಕಾಣಿಸಿತು. ಅದರಲ್ಲಿ ಹೀಗೆ ಬರೆದಿತ್ತು. ನೀವು ಈ ನೀರನ್ನು ಯಂತ್ರದ ಪಕ್ಕದಲ್ಲಿರುವ ಫನಲ್ ನಲ್ಲಿ ಹಾಕಿ. ನಂತರ ಗಾಲಿ ತಿರುಗಿಸಿ ಜೋರಾಗಿ ನೀರು ಬರುತ್ತದೆ.
ಸ್ನಾನ ಮಾಡಿ, ನಿಮ್ಮ ಬಳಿ ಇರುವ ಕ್ಯಾನ್ ಗಳಲ್ಲಿ ನೀರು ತುಂಬಿಸಿಕೊಳ್ಳಿ ಬಳಿಕ ಮರೆಯದೆ ಈ ಬಾಟಲಿಗೂ ನೀರು ತುಂಬಿಸಿ ಮುಚ್ಚಳ ಮುಚ್ಚಿ, ನಿಮ್ಮಂತೆ ನೀರು ಹುಡುಕಿ ಬರುವವರಿಗೆ ಇದು ಸಹಾಯ ಆಗುತ್ತದೆ. ವ್ಯಕ್ತಿ ಗೊಂದಲಕ್ಕೆ ಬಿದ್ದ. ಕೈಯಲ್ಲಿರುವ ನೀರು ಕುಡಿಯುವುದೋ, ಇಲ್ಲ ಚೀಟಿಯಲ್ಲಿ ಬರೆದಿರುವಂತೆ ನೀರನ್ನು ಫನಲ್ ಗೆ ಹಾಕಿ ಗಾಲಿ ತಿರುಗಿಸಿ ಹೆಚ್ಚು ನೀರು ಪಡೆಯಲು ಪ್ರಯತ್ನ ಮಾಡುವುದೋ ಎಂದು ಯೋಚಿಸಿದ. ಆಕಸ್ಮಾತ್
ಹಳೆಯ ಪಂಪ್ ನಿಂದ ನೀರು ಬಾರದಿದ್ದರೆ ಏನು ಮಾಡುವುದು ನೀರು ಕುಡಿದೇ ಬಿಡೋಣ ಎಂದುಕೊಂಡ. ಈ ನೀರು ಎಷ್ಟು ಹೊತ್ತು ಇರಲು ಸಾಧ್ಯ. ಈಗ ಜೀವ ಉಳಿದರೂ ನಾನು ಜನವಸತಿ ಹುಡುಕಿ ಹೊರಟರೆ ಮತ್ತೆ ನೀರಡಿಕೆಯಿಂದ ಸಾಯುವುದು ಖಂಡಿತ. ಹೆಚ್ಚು ನೀರು ಸಿಕ್ಕರೆ  ಬಾಟಲಿ, ಕ್ಯಾನ್ ಗಳಿಗೆ ತುಂಬಿಸಿಕೊಂಡು ಮುಂದೆ ಸಾಗಬಹುದು ಎಂದು ದೃಢ ನಿರ್ಧಾರ ಮಾಡಿ ಬಾಟಲಿಯಲ್ಲಿದ್ದ ನೀರನ್ನು ಪಂಪ್ ನ ಫನಲ್ ಮುಚ್ಚಳ ತೆರೆದು ಹಾಕಿದ, ಗಾಲಿ
ತಿರುಗಿಸಿದ ಯಥೇಚ್ಛವಾಗಿ ನೀರು ಬಂತು. ಸ್ನಾನ ಮಾಡಿದ ಆಯಾಸ ತೀರಿಸಿಕೊಂಡ. ತನ್ನ ಬಾಟಲಿಗಳಿಗೆ, ಕ್ಯಾನ್ ಗಳಿಗೆ ನೀರು ತುಂಬಿಸಿದ. ಆ ಪುಟ್ಟ ಕ್ಯಾನ್ ಗೂ ನೀರು ಹಾಕಿ ಆ ಚೀಟಿಯ ಕೆಳಗೆ ಈ ಯಂತ್ರ ನೀರು ಹಾಕಿದರೆ ಕೆಲಸ ಮಾಡುತ್ತದೆ. ಅಂಜಿಕೆ ಬೇಡ ಎಂಬ ಸಾಲು ಸೇರಿಸಿದ. ಬಳಿಕ ಇನ್ನೇನು ಹೊರಡಬೇಕು ಎಂದು ಬಾಗಿಲು ತೆಗೆದಾಗ ಆ ಬಾಗಿಲ ಹಿಂದೆ ಜನವಸತಿಗೆ ಸಾಗುವ ದಾರಿ ತೋರುವ ನಕ್ಷೆ ಕಾಣಿಸಿತು. ಆ ನಕ್ಷೆಯ ಮಾರ್ಗ ಅನುಸರಿಸಿ ಊರು
ಸೇರಿದ.
ನಾವು ಯಾವಾಗಲೂ ಜೀವನದಲ್ಲಿ ಹತಾಶರಾಗಬಾರದು. ಕೊನೆ ಕ್ಷಣದವರೆಗೂ ಹೋರಾಟ ಮಾಡಬೇಕು. (ಭಾರತ -ಬಾಂಗ್ಲಾದೇಶದ ಪಂದ್ಯದಲ್ಲಿ ಕೊನೆ ಎಸೆತದಲ್ಲಿ ಜಯ ಸಿಕ್ಕಂತೆ) ಎಲ್ಲಕ್ಕಿಂತ ಮಿಗಿಲಾಗಿ ನಾವು ಈ ಸಮಾಜಕ್ಕೆ ಏನಾದರೂ ಕೊಟ್ಟರೆ ನಮಗೆ ಸಮಾಜ ಏನನ್ನಾದರೂ ಕೊಡುತ್ತದೆ ಎಂಬುದನ್ನು ಅರಿಯಬೇಕು. ಆ ವ್ಯಕ್ತಿ ತಾನು ಇದ್ದ ನೀರು ಕುಡಿಯದೆ ಪ್ರಯತ್ನ ಮಾಡಿದ್ದಕ್ಕೆ ಅವನಿಗೆ ಯಥೇಚ್ಛ ನೀರು ಸಿಕ್ಕಿತು. ಮತ್ತೆ ಆತ ಬಾಟಲಿಗೆ ನೀರು
ತುಂಬಿಸಿಟ್ಟಿದ್ದರಿಂದ ಮುಂದೆ ಬರುವವರಿಗೂ ಅದು ನೆರವಾಗುವಂತಾಯಿತು. ನಾವು ಸದಾ ಭವಿಷ್ಯದ ಚಿಂತನೆ ಮಾಡಿದರೆ ಬದುಕು ಬಂಗಾರವಾಗುತ್ತದೆ. ಸ್ವಾರ್ಥಕ್ಕೆ ಸಿಲುಕಿದರೆ ಬದುಕು ನಾಶವಾಗುತ್ತದೆ. - ಇಷ್ಟುವಾದರೆ ಶೇರ್ ಮಾಡಿ -

*********

Words don't have the power to hurt us,
Unless, the person who said it, means a lot to Us..
When Something Bad Happens To You 
It Can Make You A Bitter Person Or A Better Person. 
The Choice Is Yours.

*********

What is Poison?
He replied with a beautiful answer - Anything which is more than our necessity is Poison. It may be Power, Wealth, Hunger, Ego, Greed, Laziness, Love, Ambition, Hate or anything

What is fear.....?
Non acceptance of uncertainty.
If we accept that uncertainty, it becomes adventure...!

What is envy ?
Non acceptance of good in others
If we accept that good, it becomes inspiration...!

What is Anger?
Non acceptance of things which are beyond our control.
If we accept, it becomes tolerance...!

What is hatred?
Non acceptance of person as he is. 
If we accept person unconditionally, it becomes love...!

*********

"You start dying slowly" - By Pablo Neruda

You start dying slowly
if you do not travel,
if you do not read,
If you do not listen to the sounds of life,
If you do not appreciate yourself.
You start dying slowly

When you kill your self-esteem;
When you do not let others help you.
You start dying slowly

If you become a slave of your habits,
Walking everyday on the same paths…
If you do not change your routine,
If you do not wear different colours
Or you do not speak to those you don’t know.
You start dying slowly

If you avoid to feel passion
And their turbulent emotions;
Those which make your eyes glisten
And your heart beat fast.
You start dying slowly

If you do not change your life when you are not satisfied with your job, or with your love,
If you do not risk what is safe for the uncertain,
If you do not go after a dream,
If you do not allow yourself,
At least once in your lifetime,
To run away 
You start dying
Slowly

*********

Dreams are renewable... 
No matter what our age or condition...
There are still untapped possibilities within us...
And a new beauty waiting to be born...

Keep Growing.......!😀

*********

When people believe in us,
it gives us Courage and Motivation.

But when we believe in our self,
It gives us Persistence, Determination and Infinite Energy....

*********

One interesting word in English. 

 OXYMORON 

An Oxymoron is defined as a phrase in which two words of opposite meanings are brought together....

Here are some funny oxymorons :

 1)  Clearly Misunderstood
 2)  Exact Estimate
 3)  Small Crowd
 4)  Act Naturally
 5)  Found Missing
 6)  Fully Empty
 7)  Pretty Ugly
 8)  Seriously Funny
 9)  Only Choice
10)  Original Copies
11)  Open Secret
12) Tragic Comedy
13) Foolish Wisdom
14) Liquid Gas

 Mother of all Oxymorons is-

15) "Happily Married".


ಧರ್ಮದ ಹತ್ತು ಲಕ್ಷಣಗಳು Dharma 10 characteristics


1. ಧೃತಿ : ಎಲ್ಲಕ್ಕಿಂತ ಮೊದಲು ಧೈರ್ಯವಿರಬೇಕು. ಮನದಲ್ಲಿ ಮೂಡಿದ ಒಂದು ಒಳ್ಳೆಯ ಚಿಂತನೆಯನ್ನು ಕಾರ್ಯರೂಪಕ್ಕೆ ತರುವೆನೆಂಬ ಧೈರ್ಯ, ಆತ್ಮ ವಿಶ್ವಾಸವಿದ್ದರೆ ಮುಂದಿನದೆಲ್ಲಾ ಸುಲಭ. 


2. ಕ್ಷಮಾ : ನಿಂದೆ-ಸ್ತುತಿ, ಲಾಭ-ನಷ್ಟ, ಸುಖ-ದುಃಖ ಮೊದಲಾದ ದ್ವಂದ್ವಗಳಲ್ಲಿ ಸಹನೆಯನ್ನು ಕಾಪಾಡಿಕೊಳ್ಳುವ ಪರಿ. ಕಷ್ಟವಾದರೂ ಅಸಾಧ್ಯವೇನಲ್ಲ.
3. ದಮ : ಮನಸ್ಸು ಸದಾ ಧರ್ಮಮಾರ್ಗದಲ್ಲಿದಾಗ ಮಾತ್ರ ಅಧರ್ಮಾಚರಣೆಯನ್ನು ತಡೆಯಲು ಸಾಧ್ಯ. ಯಾವುದೇ ಕಾರಣಕ್ಕೂ ಅಧರ್ಮ ಮಾರ್ಗದಲ್ಲಿ ಹೋಗುವುದಿಲ್ಲವೆಂಬ ನಿರ್ಧಾರ. 


4. ಅಸ್ತೇಯ ; ಪರರ ಸ್ವತ್ತು ನನಗೆ ಮಣ್ಣಿನ ಹೆಂಟೆಯೆಂಬ ಭಾವ ಬಂದಾಗ ಅದನ್ನು ಕದಿಯುವ ಮನಸ್ಸು ಬರುವುದಿಲ್ಲ. ಪರರ ಸ್ವತ್ತಿಗೆ ಆಸೆಪದದಿರುವುದೇ ಶ್ರೀಮಂತಿಕೆ. 


5. ಶೌಚ : ರಾಗ ದ್ವೇಷ, ಪಕ್ಷಪಾತವನ್ನು ಮಾಡದಿರುವುದು ಒಳಗಿನ ಶೌಚ, ಸ್ನಾನ ಮಾಡುವುದು ಹೊರಗಿನ ಶೌಚ. ಎರಡೂ ಬೇಕು 


6. ಇಂದ್ರಿಯ ನಿಗ್ರಹ : ಇದೊಂದು ಮನುಷ್ಯನಿಗೆ ಸದಾ ಕಾಟಕೊಡುವ ವಿಚಾರ.ಧರ್ಮ ಮಾರ್ಗದಲ್ಲಿದ್ದಾಗ ಇಂದ್ರಿಯಗಳು ನಮಗೆ ಕಾಟಕೊಡಲಾರವು 


7.ಧೀಃ : ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯೋಗ, ಸಜ್ಜನರ ಸಹವಾಸ,ಶ್ರೇಷ್ಠಪದಾರ್ಥಗಳ ಸೇವನೆಯಿಂದ ಸಾಧ್ಯ. ಅದಕ್ಕೆ ವಿರುದ್ಧವಾದ ಮಾದಕದ್ರವ್ಯಗಳ ಸೇವನೆ,ಆಲಸ್ಯ, ದುಷ್ಟ ಸಂಗವು ಬುದ್ಧಿಯನ್ನು ನಾಶಮಾಡುತ್ತದೆ. ಇಂದಿನ ಕಾಲಕ್ಕೆ ದೂರದರ್ಶನ ಮತ್ತು ಅಂತರ್ಜಾಲದಲ್ಲಿ ಧೀಃ ಶಕ್ತಿಯನ್ನು ಹೆಚ್ಚಿಸಬಲ್ಲ ಕಾರ್ಯಕ್ರಮಗಳೂ ಇವೆ. ನಾಶಮಾಡುವ ಹೆಚ್ಚು ಕಾರ್ಯಕ್ರಮಗಳು ಇವೆ.ಆಯ್ಕೆ ನಮ್ಮದೇ. 


8. ವಿದ್ಯಾ : ಪೃಥಿವಿಯಿಂದ ಪರಮೇಶ್ವರನವರೆಗೂ ಸರಿಯಾದ ಅರಿವು ಮತ್ತು ಯಥೋಚಿತ ಉಪಯೋಗವೇ ವಿದ್ಯೆ. ಇದಕ್ಕೆ ವಿರುದ್ಧವಾದುದು ಅವಿದ್ಯೆ. 


9. ಸತ್ಯ : ಅಂತರಾತ್ಮನಲ್ಲಿರುವಂತೆ ಮನದಲ್ಲಿ,ಮನದಲ್ಲಿರುವಂತೆ ವಾಣಿಯಲ್ಲಿ, ವಾಣಿಯಂತೆ ಕೃತಿಯಲ್ಲಿ ವರ್ತಿಸುವುದೇ ಸತ್ಯ. 


10. ಅಕ್ರೋಧ : ನಮ್ಮ ಸಿಟ್ಟು ನಮ್ಮನ್ನೇ ನಾಶಮಾಡುತ್ತದೆ. ಆದ್ದರಿಂದ ಸಿಟ್ಟು ಮಾಡದಿರುವುದು ನಮಗೇ ಕ್ಷೇಮ.

 
ಧರ್ಮದ ಹತ್ತು ಲಕ್ಷಣಗಳು Dharma 10 characteristics

Ugadi greetings wishes ಯುಗಾದಿ ಶುಭಾಶಯಗಳು

"ಯುಗಾದಿ ಹಬ್ಬ ಮತ್ತು ವಿಶೇಷತೆಗಳು"

ಹಬ್ಬ-ಹರಿದಿನ, ಉತ್ಸವಗಳು , ನಮ್ಮ ಭಾರತೀಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿ ಬಂದಿದೆ.. 
ಬಹುಷಃ ನಮ್ಮ ದೇಶದಲ್ಲಿ ನಡೆಯೋ ಹಬ್ಬ ಹರಿದಿನ ಜಾತ್ರೆಗಳು ಬೇರೆಲ್ಲೂ ನಡೆಯುವುದಿಲ್ಲ..
ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಸಂಸ್ಕೃತಿ, ಕಾರಣಗಳು ಇವೆ. ಇದೇ ಕಾರಣಕ್ಕೆ ನಮ್ಮ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿವೆ..
ಇಂತಹುದರಲ್ಲಿ ಹಿಂದೂ ವರ್ಷದ, ಹೊಸ ಸಂವತ್ಸರದ ಮೊದಲ ಹಬ್ಬ "ಯುಗಾದಿ"ಯೂ ಒಂದು..
ಈ "ಯುಗಾದಿ" ಹಬ್ಬವು ಚಾಂದ್ರಮಾನ ಮತ್ತು ಸೌರಮಾನ ಎಂದು ಎರಡು ವಿಧಾನವಾಗಿದೆ..
ಆಂಧ್ರ ಮತ್ತು ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ..
ಕೆಲವು ಕಡೆ ಸೌರಮಾನ ಯುಗಾದಿ ಆಚರಿಸುತ್ತಾರೆ..

ಯುಗಾದಿ ಅಂದರೆ ಯುಗದ ಆದಿ, ಯುಗದ ಪ್ರಾರಂಭ ಎಂದರ್ಥ..
ಈ ದಿನವನ್ನು ಬ್ರಹ್ಮದೇವರು ಸೃಷ್ಟಿಸಿದ್ದಾನೆಂದು ತುಂಬಾ ಗ್ರಂಥಗಳು ಹೇಳುತ್ತವೆ..
ಈ ದಿನದಂದು ಮಹಾವಿಷ್ಣುವು " ಮತ್ಸ್ಯಾವತಾರವನ್ನು " ತಾಳಿದನು..

"ಶ್ರೀ ರಾಮಚಂದ್ರರು ಕಾಡಿನಿಂದ ಅಯೋಧ್ಯೆಗೆ ಹಿಂತಿರುಗಿದ ದಿನವಿದು, ಈ ದಿನ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ ,ಎಂದು ಗ್ರಂಥಗಳು ಹೇಳುತ್ತವೆ..
ವಸಂತ ನವರಾತ್ರಿಗಳು ಈ ದಿನದಂದು ಪ್ರಾರಂಭವಾಗಿ, ಶ್ರೀ ರಾಮಚಂದ್ರ ಪಟ್ಟಾಭಿಷೇಕದ ಪೂಜೆಗಳು, ದುರ್ಗಾಸಪ್ತಶತೀ ಪಾರಾಯಣಗಳು, ಈ ದಿನ ಪ್ರಾರಂಭವಾಗುವುದು ತುಂಬಾ ವಿಶೇಷ..

ಈ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಏಳಬೇಕು. ಎದ್ದ ತಕ್ಷಣ ದೇವರನ್ನು ಧ್ಯಾನಿಸಿ ನಂತರ ಅಭ್ಯಂಜನ ಸ್ನಾನ ಮಾಡಬೇಕು.
ತಲೆಗೆ ಎಣ್ಣೆಯನ್ನು ಮನೆಯ ಹೆಂಗಸರು ಸುಮಂಗಲಿಯರಿಂದನೇ ಹಚ್ಚಿಸಿಕೊಳ್ಳಬೇಕು..
ಮನೆಯನ್ನು ಶುದ್ಧಗೊಳಿಸಿ, ಮಾವಿನ ಎಲೆಗಳಿಂದ ತೋರಣ ಕಟ್ಟಬೇಕು..
ದೇವರ ಪೂಜೆ, ಅಭಿಷೇಕ, ನೈವೇದ್ಯ, ಪಂಚಾಂಗ ಪೂಜೆ ಮಾಡುವುದು ತುಂಬಾ ಒಳ್ಳೆಯದು ..
"ಬ್ರಾಹ್ಮಣರಿಗೆ ಫಲತಾಂಬೂಲದೊಂದಿಗೆ ಪಂಚಾಂಗ ದಾನ ಮಾಡಿದರೆ ತುಂಬಾ ಒಳ್ಳೆಯದು..
ನಂತರ ದೇವರಿಗೆ ಬೇವು ಬೆಲ್ಲ ನೈವೇದ್ಯ ಮಾಡಿ, ಸುಖ ದುಃಖ ಏನೇ ಬಂದರೂ ನಿಮ್ಮ ಆಶೀರ್ವಾದ ಇರಲಿ, ನಮಗೆ ಆಯಸ್ಸು ಆರೋಗ್ಯ ಕರುಣಿಸಿ ಎಂದು ಪ್ರಾರ್ಥಿಸಿ, ಬೇವು ಬೆಲ್ಲವನ್ನು, ಮೊದಲು ಹಸುವಿಗೆ ಕೊಟ್ಟು ನಮಸ್ಕರಿಸಿ, ನಂತರ ಮನೆಯ ಹಿರಿಯರಿಗೆ ಮತ್ತು ಗುರುಸ್ಥಾನದ ವ್ಯಕ್ತಿಗಳಿಗೆ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು..
ನಂತರ ನೀವು ಸ್ವೀಕರಿಸಬೇಕು.. 
 
Ugadi wishes

*********

ಬೇವು ಬೆಲ್ಲ ಸೇವಿಸುವಾಗ..
"ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||"

ತಾತ್ಪರ್ಯ : ನೂರುವರ್ಷ ವಜ್ರದಂತೆ ಗಟ್ಟಿಯಾದ ದೇಹದ ಶಕ್ತಿ, ಎಲ್ಲಾ ರೀತಿಯ ಐಶ್ವರ್ಯ ಸಂಪತ್ತುಗಳ ಪ್ರಾಪ್ತಿಗಾಗಿ,ಮತ್ತು ಸಕಲಾರಿಷ್ಟಗಳೂ ನಿವಾರಣೆಯಾಗಲೆಂದು ಬೇವು ಬೆಲ್ಲ ಸೇವನೆ ಮಾಡುತ್ತೇನೆ.."!

ವಿಶೇಷ ವಿಷಯ:

ಯುಗಾದಿಯ ದಿನ "ವಿದ್ಯಾವ್ರತವನ್ನು" ಬೇಕಾದರೂ ಮಾಡಬಹುದು. ಯಾರಿಗೆ ವಿದ್ಯೆ ಸರಿಯಾಗಿ ಬರುತ್ತಿಲ್ಲ, ಓದಿದ್ದೆಲ್ಲಾ ಮರೆತು ಹೋಗುತ್ತಿದೆ, ತುಂಬಾ ದಡ್ಡರಾಗಿದ್ದಾರೆ ಅನ್ನುವವರು "ಹಯಗ್ರೀವ ದೇವರನ್ನು ಮತ್ತು ದತ್ತಾತ್ರೇಯ"ರನ್ನು ಪೂಜಿಸಿ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ವಸ್ತುಗಳು ದಾನ ಮಾಡಬೇಕು.."
ಈ ದಿನ
"ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||"

ಈ ಸರಸ್ವತೀ ದೇವಿ ಸ್ತೋತ್ರ ೩೩ ಸಾರಿ ಹೇಳಿ, ಸರಸ್ವತೀ ದೇವಿ ಪೂಜಿಸಿ, "ಬೆಲ್ಲದನ್ನ" ಅಥವಾ ಪೊಂಗಲ್ ನೈವೇದ್ಯ ಮಾಡಿದರೆ, ಮಕ್ಕಳು ತುಂಬಾ ತುಂಬಾ ವಿದ್ಯಾವಂತರಾಗುತ್ತಾರೆ ಮತ್ತು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ..

ಪಂಚಾಂಗ ಶ್ರವಣ ಅಥವಾ ಓದುವುದರಿಂದ ಫಲ.

"ಚೈತ್ರ ಶುಕ್ಲಪಕ್ಷದಲ್ಲಿ ವರ್ಷದ ರಾಜ ಮಂತ್ರಿ ಮೊದಲಾದ ಪಂಚಾಂಗದಲ್ಲಿನ ಫಲಗಳನ್ನು ಯಾರು ಕೇಳುತ್ತಾರೋ, ಅಂಥವರು ಪಾಪ ಫಲಗಳಿಂದ ಮುಕ್ತರು, ಆರೋಗ್ಯವಂತರು, ಆಯುಷ್ಯವಂತರೂ , ಐಶ್ವರ್ಯವಂತರೂ ಸುಖನುಭವಿಗಳೂ ಆಗುತ್ತಾರೆ..

ತಿಥಿಯಿಂದ ಐಶ್ವರ್ಯ, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ರೋಗ ಪರಿಹಾರ, ಕರಣದಿಂದ ಕಾರ್ಯಸಿದ್ಧಿ, ಮುಂತಾದ ಶುಭಫಲಗಳು ಪಂಚಾಂಗದಿಂದ ಲಭಿಸುತ್ತವೆ..

"ಹೀಗೆ ವಿಧಾನೋಕ್ತವಾಗಿ ಯುಗಾದಿ ಆಚರಣೆ ಮಾಡಿದರೆ ಇಡೀ ವರ್ಷ ಶುಭದಾಯಕವಾಗಿರುವುದರಲ್ಲಿ ಸಂದೇಹವಿಲ್ಲ..

**********
ಸೃಷ್ಟಿಯ ಮೊದಲ ದಿನ 
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳ ಚಿಗುರೊಡೆಯುವ ದಿನ
ಹಿಂದೂ ವರ್ಷಾರಂಬ ದಿನ

ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿🌱🎍🎋🎋🎋
********** 
🌿🌱ಯುಗಾದಿ🌱🌿
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ 
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !! 
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

              ತಮಗು ಮತ್ತು ತಮ್ಮ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ, ಜೊತೆಗೆ  ತರಲಿ
      ಎಲ್ಲಾ  ಬಂಧು  ಮಿತ್ರರು ಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....😃
🙏🙏🙏🍋🍃🌴

*********

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಸಂದರ್ಭದಲ್ಲಿ, ನಮ್ಮ ಬಾಲ್ಯದ ನೆನಪಿನ ಪದ್ಯ

ವಸಂತ ಬಂದ 
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
 
ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
 
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
 
ಬಂದ ವಸಂತ -ನಮ್ಮಾ
ರಾಜ ವಸಂತ !!

*********
 
ಜಗತ್ತಿನ ಎಲ್ಲಾ ಸುಖವೂ ತನ್ನದಾಗ ಬೇಕೆಂಬುದು ಮಾನವರ ಸಹಜವಾದ ಗುಣ ಆದರೆ ಅವರವರ ಯೋಗ್ಯತೆಗೆ ತಕ್ಕಂತೆ ಸುಖದುಃಖಗಳನ್ನು ಅನುಭವಿಸುವುದು ಭಗವಂತನ ಸಂಕಲ್ಪ .ಬೇವು ಬೇಲ್ಲದ ಮಿಶ್ರಣದಂತೆ ಎಲ್ಲರ ಜೀವನದಲ್ಲಿ ಸುಖದುಃಖಗಳು ಬಂದುಹೋಗುತ್ತದೆ .ಆ ಭಗವಂತನ ದಯೆಯಿಂದ ನಿಮ್ಮ ಜೀವನದಲ್ಲಿ ದುಖವೆಂಬ ಬೇವಿಲ್ಲದೆ ಸುಖವೆಂಬ ಬೆಲ್ಲವು ಇಮ್ಮಡಿಯಾಗಲಿ ಎಂದು ಸದಾ ಪ್ರಾರ್ಥಿಸುತ್ತಾ ಹೊಸ ವರ್ಷದ ಶುಭಾಶಯಗಳು.

*********
💐🌿🌾ಸಮಸ್ತರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

*********
ಬದುಕು - ಇಲ್ಲಿ ಸಿಹಿ, ಕಹಿಗಳು ಸಾಮಾನ್ಯ. ಹೊಸ ವರ್ಷದ ಆರಂಭ ಬೇವು, ಬೆಲ್ಲ ಸವಿಯುತ್ತ ಆರಂಭಿಸೋಣ. ಬೇವು ಬೆಲ್ಲಗಳ ಸಮ್ಮಿಲನವೇ ನಮ್ಮ ಜೀವನ. ಸಿಹಿಯಂತೆ ಕಹಿಯನ್ನೂ ಸ್ವೀಕರಿಸುತ್ತ ಬದುಕು ಮುನ್ನಡೆಸೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
********* 
ಬೇವು ಬೆಲ್ಲ ಸವಿಯುವ ತವಕದಲಿ
ಆರೋಗ್ಯ ನೆಮ್ಮದಿಯ ಜೀವನ ಬೇಡುವ ಸಂತಸದಲಿ
ಒಬ್ಬಟ್ಟಿನೂಟವ ಸವಿಯುವ ಖುಷಿಯಲಿ
ಬರುವ ಸಂವತ್ಸರವ ಸ್ವಾಗತಿಸುವ
********* 
ಜೀವನದ ಪಯಣದಲಿ
ಹೊಸ ವರ್ಷ(ಯುಗಾದಿ) ಹರುಷ ತರಲಿ...
ನವ ಬಾಳು ಬೆಳಗಲಿ...
ನವ ಚೈತನ್ಯ ಚಿಮ್ಮಲಿ...
ಕಹಿ-ನೋವುಗಳು ತೊಲಗಲಿ...
ಸಿಹಿ-ನಲಿವುಗಳು ಬರಲಿ...
ಶಾಂತಿ,ಸಮೃದ್ಧಿ,ನೆಮ್ಮದಿ ಬಾಳಲಿ ಸಿಗಲಿ...
🌱🌴🌿🍃🌾🌱🌴🌿🍃
 
********* 
🌹ನೆಮ್ಮದಿ ಹರುಷವನ್ನು🌹
  🌺ತಂದು ಕೊಡಲಿ ಈ 🌺 
    🌻ನವ ಯುಗಾದಿ 🌻

🍃ಬೇವು ಬೆಲ್ಲವ ಸವಿದು 🌿
🍃ದುಃಖ ದುಮ್ಮಾನವ 🌿
  🍃   ಕಳೆಯಲಿ ಈ.  🌿
   🍃ಶುಭ ಯುಗಾದಿ 🌿

🍋ಮಾವು,ಬೇವು ಗಳ🍃
🍃ಸವಿದು ಸುಖ ಸಮೃದ್ಧಿ🍋
🍀 ಗಳನ್ನು ತರಲಿ ಈ🍀
  🌹ಶುಭ ಯುಗಾದಿ 🌹
🌹💐🌺💐💐🌺💐🌹
 
Ugadi wishes

***********
ಪಾಡ್ಯದ ರವಿ ಉದಯಿಸಿರಲು..
ಚೈತ್ರದ ಬಾಗಿಲಲ್ಲಿ..
ಹೊಸ ಚಿಗುರ ರಂಗವಲ್ಲಿ...

ಹೊಸ ಸಂವತ್ಸರದ ಬೆಳಕಲ್ಲಿ 
ಸಿಹಿಕಹಿಗಳ ಹೂರಣವಿಹುದು
ಬೇವು- ಬೆಲ್ಲಗಳ ಮಿಶ್ರಣದಲ್ಲಿ..

ಹಳೆ ಎಲೆಗಳ ಉದುರಿಸಿ 
ಹೊಸ ಚಿಗುರ ತೊಟ್ಟು..
ಪ್ರಕೃತಿ ಸಂಭ್ರಮಿಸುವಂದದಿ...

ಹಳೆಯ ನೋವೆಲ್ಲವ ಮರೆಸಿ 
ಹೊಸ ಆಶಯಗಳ ಕೊಟ್ಟು 
ಎಲ್ಲರಿಗೂ ಶುಭ ತರಲಿ 
ಚಾಂದ್ರಮಾನ ಯುಗಾದಿ....
 
************************
ಯುಗಾದಿ ಹಬ್ಬ ಸರ್ವರಿಗೂ ಶುಭವನ್ನುಂಟುಮಾಡಲಿ
ಹೊಂಗೆಯ ತೊಂಗಲಿನಲ್ಲಿ ಎಂದಿನಂತೆ ದುಂಬಿಗಳಿವೆ. ಮಾವು ಚಿಗುರಿದೆ. ಬೇವಿನ ಹೂವಿನ ಕಂಪು ಹರಡಿದೆ. ಪ್ರಕೃತಿ ಎಂದೆಂದಿಗೂ ಸೌಂದರ್ಯವತಿ. ನಾವು ಅದನ್ನು ಗುರುತಿಸುವಲ್ಲಿ ಒಮ್ಮೊಮ್ಮೆ ಸೋಲುತ್ತೇವೆ. ಕಾರಣ ನಮಗೆ ನಮ್ಮದಷ್ಟೇ ನೋವು ನಲಿವುಗಳು ಪ್ರಮುಖ. ನಮ್ಮೊಂದಿಗೆ ಎಲ್ಲರನ್ನೂ ಸೇರಿಸಿಕೊಳ್ಳುವ ಮನಸ್ಸು ಮಾಡುವಾ.
ಈ ಸಮಯದಲ್ಲಿ ಹಿರಿಯರಿಗೆ ನಮಸ್ಕಾರಗಳು🙏🏼🙏🏼. ಕಿರಿಯರಿಗೆ ಶುಭಾಶೀರ್ವಾದಗಳು.✋🏾✋🏾 ಸ್ನೇಹವಲಯಕ್ಕೆ ಹಾರೈಕೆಗಳು.👍🏻👍🏻
ಎಲ್ಲರಿಗೂ ಒಳಿತಾಗಲಿ.☘️❤️. 

******************************
ಬದುಕೆಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. 
ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. 
ಯುಗಾದಿ ಹೊಸ ಸಂವತ್ಸರದಲ್ಲಿ ನಮ್ಮ  ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು, 
ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸುಗಳೊಂದಿಗೆ ನೆಮ್ಮದಿಯ ಬದುಕನ್ನು 
ದಯಪಾಲಿಸಲಿ ಎಂದು  ಎಂದು ಪ್ರಾರ್ಥಿಸೋಣ
************************
ಬೇವು ಎಷ್ಟೇ ಕಹಿಯಿದ್ದರೂ ಅದರ ರೋಗ ನಿರೋಧಕ ಶಕ್ತಿ ಮಹತ್ವದ್ದು.ಹಾಗೆಯೇ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳು  ನಮ್ಮ ಮನಸ್ಸನ್ನು ಧೃಡಪಡಿಸಿ ಸಾಗುವುದನ್ನು ಕಲಿಸುತ್ತದೆ.
ಬೆಲ್ಲ ಎಷ್ಟೇ ಸಿಹಿಯೆನಿಸಿದರೂ ನಿರಂತರ ಸ್ವೀಕರಿಸಲಾಗುವುದಿಲ್ಲ..
ಹಾಗೂ ಕಹಿಯ ರುಚಿ  ಅನುಭವ ಇಲ್ಲದಿದ್ದರೇ ಸಿಹಿಯ ಬೆಲೆಯ ಆನಂದಿಸಲಾಗುವುದಿಲ್ಲ. 
ಸಿಹಿ-ಕಹಿ ಘಟನೆ ಗಳು ನಮ್ಮ ಜೀವನದಲ್ಲಿ ಬಂದಾಗಲು ಸಹ, 
ಬೆಲ್ಲದಂಥ ಮನಸ್ಸು ನಮ್ಮದಾಗಿ ದೇವರ ದಯೆಇಂದ ಕಹಿಯನ್ನೂ ಸಹ ಸಿಹಿಯಾಗಿ 
ಪರಿವರ್ತಿಸುವ ಆಶಯದೊಡನೆ ಈ ನೂತನ ವರ್ಷವನ್ನು ಪ್ರಾರಂಭಿಸೋಣ. 
************************ 
ಯುಗಾದಿ ಹಬ್ಬ ಎಲ್ಲರಿಗೂ ಮಂಗಳವನ್ನು, ಆರೋಗ್ಯವನ್ನು, ನಿರ್ಭಯತೆಯನ್ನು, ಸಂತಸವನ್ನು, ಸಂಸ್ಕೃತಿ ಪ್ರೇಮವನ್ನು, ಧರ್ಮದ ಶ್ರದ್ಧೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ 
************************ 
ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ , ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ . ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ
ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
************************* 
ಕಂಡ  ಕನಸುಗಳೆಲ್ಲಾ  ಹೊಸ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ  ಸಮೃದ್ಧವಾಗಿ ಬೆಳೆದು ನನಸಾಗಲಿ 
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
************************** 
Ugadi wishes

 
 
Let the sweetness of Jaggery fill in further joy
Let the bitterness of Neem leaves keep you healthy  
May you , your family and loved ones have a healthy and joyful life
We wish you a Happy Ugadi 🙏🏼
********************************
Life is wonderful full of surprises
May you get the strength to lead it with right balance
Just like how Jaggery and Neem make a healthy balance
Wish you and your family a prosperous Ugadi festival 🙏🏼
************************************ 
May Neem's bitterness , raw mango's sourness and
Sweetness of the jaggery remind you that life is a mixed bag.
Enjoy every moment and put your best foot forward 
A very Happy Ugadi to you and your family  🙏🏼
************************************ 
May this Ugadi bring joy , health and wealth to you.
Wish you a happy Ugadi 
************************************ 
Ugadi wishes

 
 
ಯುಗಾದಿ  ವಿಶೇಷ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ!..
ಯುಗಾದಿಯೆಂದರೆ ಬೇವು ಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗ ಶ್ರವಣ ಮತ್ತು ಬೇಂದ್ರೆ ಕವನ..
ಯುಗಾದಿಯಂದು ಸಂಭ್ರಮದ ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ನಿತ್ಯನೂತನ ಕವನ ‘ಯುಗಾದಿ’ ತರುವುದು ಹೊಸ ಹರುಷ. ಯುಗಾದಿಗೆ ‘ಯುಗಾದಿ’ಯೇ ಸಾಟಿ; ‘ಯುಗಾದಿ’ಗೆ ಯುಗಾದಿಯೇ ಸಾಟಿ.
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ..
ಯುಗಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿವರ್ಷವೂ ಹೊಸ ವರ್ಷಕ್ಕಾಗಿ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯು ಸಾರುವಾಗ ಎಂತಹವರ ಕವಿಯಲ್ಲದ ಮನವೂ ಹರ್ಷದಿಂದ ಹೊಂಗತೊಡಗುತ್ತದೆ. ವೃಕ್ಷಗಳ ಜೀವಸೆಲೆಯೊಡನೆ, ಪಕ್ಷಿಗಳ ಜೀವನೆಲೆಯನ್ನು ಬೆಸೆಯುವ ವಸಂತನು ಪ್ರತಿ ವರುಷ ಜಗದ ಜೀವಜಾತಕೆ ನಮ್ಮ ಹೃದಯವನ್ನು ತೆರೆದು ಸೃಷ್ಟಿನಿಯಮದ ಬಗ್ಗೆ ನಮ್ಮನ್ನು ಎಚ್ಚರಿಸುತ್ತಾ, ನಮ್ಮ ಮಸ್ತಿಷ್ಕಕ್ಕೆ ಅರಿವಿನ ಬೆಳಕನ್ನು ಬೀರುತ್ತಾನೆ.
ಚೈತ್ರ ಮಾಸದ ಮೊದಲ ದಿನ ‘ಯುಗಾದಿ’. ಭಾರತೀಯರಿಗೆ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ವ್ಯುತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ, ಎಂದು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ ೦ – ೧೩:೨೦ ಭಾಗ(ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಆಧ್ಯಾತ್ಮಿಕ ಕಾರಣಗಳು
ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯ ದಶಮಿ) ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭ ಮುಹೂರ್ತವೇ ಆಗಿರುತ್ತದೆ.
ಪುರಾಣದ ಪ್ರಕಾರ ಬ್ರಹ್ಮ ದೇವ ಯುಗಾದಿಯ ದಿನದಿಂದ ಅಂದರೆ ಚೈತ್ರ ಶುದ್ಧದ ದಿನ ಲೋಕದ ಸೃಷ್ಟಿ ಪ್ರಾರಂಭಿಸಿದಂತೆ. ಹಿಂದೂ ಜನಾಂಗಕ್ಕೆ ಯುಗಾದಿಯ ದಿನದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಸಹ ಇಂದಿನಿಂದಲೇ ಶುರುವಾಗುತ್ತದೆ. ಹೊಸ ಪಂಚಾಗ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ.
ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ ೧೫ ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗಗಳಿಗೆ ಯುಇಗವೆಂದರೆ ೫೦೦೦ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ. ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸುವರು.
ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ. ಇಂದಿನ ದಿನದಿಂದ ಚೈತ್ರ ಮಾಸ ಪ್ರಾರಂಭವಾಗಿ ತರು ಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಐತಿಹಾಸಿಕ ಕಾರಣ
ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯ ರಾಕ್ಷಸರನ್ನು ಹಾಗೂ ರಾವಣನನ್ನು ವಧಿಸಿ ಭಗವಾನ ರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದ್ದು ಇದೇ ದಿನ. ಅದೇ ರೀತಿ ಇದೇ ದಿನದಂದು ರಾವಣವಧೆಯ ನಂತರ ಅಯೋಧ್ಯೆಗೆ ಹಿಂತಿರುಗಿದ ರಾಮನ ವಿಜಯದ ಹಾಗೂ ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸಿದರು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.
ಹಬ್ಬದ ಆಚರಣೆಯ ವಿಧಾನ
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.
ಅಭ್ಯಂಗಸ್ನಾನ
ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗ ಸ್ನಾನ ಮಾಡಬೇಕು. ದೇಹಕ್ಕೆ ಎಣ್ಣೆ ಹಚ್ಚಿ ಅದನ್ನು ತಿಕ್ಕಿ ತೀಡಿ ಚರ್ಮದಲ್ಲಿ ಸೇರುವಂತೆ ಮಾಡಿ, ನಂತರ ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗ ಸ್ನಾನ ಎನ್ನುತ್ತಾರೆ. ಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ. ಈ ಪ್ರಭಾವವು ನಿತ್ಯದ ಸ್ನಾನದಲ್ಲಿ ಮೂರು ಗಂಟೆಗಳ ಕಾಲ ಉಳಿದರೆ, ಅಭ್ಯಂಗ ಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆಗಳ ಕಾಲ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕೆಂದು ಎಣ್ಣೆ ಹಚ್ಚುತ್ತಾರೆ. ಶರೀರಕ್ಕೆ ಸುಖದಾಯಕ ಮತ್ತು ಮಂಗಳಕರವೆಂದು ಬಿಸಿನೀರಿನ ಸ್ನಾನವನ್ನು ಹೇಳಲಾಗಿದೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆ ಉಳಿಯುತ್ತದೆ. ಆದುದರಿಂದ ಸ್ನಾನ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಹಚ್ಚಬೇಕು.
ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು. ಅಭ್ಯಂಗಸ್ನಾನವನ್ನು ಮಾಡುವಾಗ ‘ದೇಶಕಾಲಕಥನ’ ಮಾಡಬೇಕು. ‘ದೇಶಕಾಲಕಥನ’ ದಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
ದೇಶಕಾಲ ಕಥನ
ಅಭ್ಯಂಗ ಸ್ನಾನ ಮಾಡುವಾಗ ದೇಶ ಕಾಲ ಕಥನ ಮಾಡಬೇಕು. ದೇಶಕಾಲ ಕಥನ ಮಾಡುವ ಭಾರತೀಯರ ಪದ್ಧತಿಯೂ ವೈಶಿಷ್ಟ್ಯ್ಯಪೂರ್ಣವಾಗಿದೆ. ಬ್ರಹ್ಮದೇವನ ಜನನವಾದಾಗಿನಿಂದ ಇಲ್ಲಿಯವರೆಗೂ ಬ್ರಹ್ಮದೇವನ ಎಷ್ಟು ವರ್ಷಗಳಾದವು, ಯಾವ ವರ್ಷದಲ್ಲಿ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ, ಈ ಮನ್ವಂತರದಲ್ಲಿನ ಎಷ್ಟನೆ ಮಹಾಯುಗ ಮತ್ತು ಅದರಲ್ಲಿ ಯಾವ ಉಪಯುಗ ನಡೆದಿದೆ, ಇವೆಲ್ಲವುಗಳ ಉಲ್ಲೇಖವು ದೇಶಕಾಲ ಕಥನದಲ್ಲಿ ಬರುತ್ತದೆ. ಇದರಿಂದ ಎಷ್ಟು ಮಹತ್ತರವಾದ ಕಾಲವು ಗತಿಸಿದೆ ಮತ್ತು ಉಳಿದ ಕಾಲವು ಎಷ್ಟು ದೊಡ್ಡದಿದೆ ಎನ್ನುವುದರ ಕಲ್ಪನೆ ಬರುತ್ತದೆ. ನಾನು ಬಹಳ ದೊಡ್ಡವನಾಗಿದ್ದೇನೆ ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ. ಆದರೆ, ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ನಾವೆಷ್ಟು ಚಿಕ್ಕವರು ಮತ್ತು ಎಷ್ಟು ಸಣ್ಣವರಾಗಿದ್ದೇವೆ ಎನ್ನುವುದರ ಅರಿವಾಗುತ್ತದೆ. ಇದರ ಒಂದು ಲಾಭವೆಂದರೆ ಮನುಷ್ಯನ ಅಹಂಭಾವವು ಕಡಿಮೆಯಾಗುತ್ತದೆ. ವರ್ಷದಲ್ಲಿ ಮುಂದಿನ ಐದು ದಿನಗಳಂದು ಹೀಗೆಯೇ ಅಭ್ಯಂಗಸ್ನಾನ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
1. ಸಂವತ್ಸರಾರಂಭ
2. ವಸಂತೋತ್ಸವದ ಮೊದಲನೆಯ ದಿನ ಅಂದರೆ ಫಾಲ್ಗುಣ ಬಹುಳ ಪ್ರತಿಪದೆ
3. ದೀಪಾವಳಿಯ ಮೂರು ದಿನಗಳು ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪ್ರತಿಪದೆ
ತೋರಣವನ್ನು ಕಟ್ಟುವುದು
ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣ ಶುಭಸೂಚಕವಾಗಿದೆ. ಸಾತ್ತ್ವಿಕ ತೋರಣದಿಂದ ಚೈತನ್ಯ ಪ್ರಕ್ಷೇಪಿತವಾಗಿ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.
ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೇಷ ತಿನಿಸು – ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.
ಬೇವು-ಬೆಲ್ಲ
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.
ಬೇವು- ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಪಂಚಾಂಗ ಶ್ರವಣ ಎಂದರೇನು ಮತ್ತು ಅದರ ಮಹತ್ವ ಏನು?
ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಹೇಳಲಾಗಿದೆ, ಅದು ಮುಂದಿನಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶ ವಾಗುತ್ತದೆ, ಯೋಗಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’
ದಾನ
ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.
ಭೂಮಿಯನ್ನು ಊಳುವುದು
ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಊಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು ಎಂದು ಹೇಳುತ್ತಾರೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೇ ಬಾಲ್ಯ ಒಂದೇ ಹರೆಯ
ನಮಗದಷ್ಟೆ ಏತಕೆ?
ಬೋಳಾದ ವೃಕ್ಷ ಪ್ರತಿ ವಸಂತದಲ್ಲೂ ಚಿಗುರಿಬಿಡುತ್ತದೆ. ಗತದ ಚಿಂತೆಯಿಲ್ಲದ ಪ್ರಾಣಿ-ಪಕ್ಷಿಗಳು ಪ್ರತಿ ವಸಂತದಲ್ಲು ಸುಗ್ಗಿಯ ಹಿಗ್ಗಿನಲ್ಲಿ ಹೊಸಬಾಳು ಆರಂಭಿಸುತ್ತವೆ. ನಿದ್ದೆಯಿಂದೆದ್ದಾಗ ನಿನ್ನೆಯ ನೆನಪಿಲ್ಲವಾಗುವಂಥ, ತತ್ಫಲವಾಗಿ ಪ್ರತಿ ಮುಂಜಾನೆಯೂ ಹೊಸ ಹುಟ್ಟಿನ ಅನುಭವ ಪಡೆಯುವಂತಹ, ಪ್ರತಿ ದಿನವೂ ಹೊಸ ಜೀವನದ ಸಂತಸ ಹೊಂದುವಂಥ ಸುಯೋಗವನ್ನು ಪ್ರತಿ ವಸಂತದಲ್ಲೂ ಗಿಡ-ಮರ, ಪ್ರಾಣಿ-ಪಕ್ಷಿಗಳಿಗೆ ಕರುಣಿಸಿರುವಂತೆ ಮಾನವರಾದ ನಮಗೆ ಆ ಸೃಷ್ಟಿಕರ್ತ ಕರುಣಿಸಿಲ್ಲ. ನಮಗೆ ಮಾತ್ರ ಒಂದೇ ಜನ್ಮ. ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗೇಕೆ ಈ ವಂಚನೆ?! ಎಂದು ಪ್ರಶ್ನೆಯನ್ನು ಒಡ್ಡುವ ಮೂಲಕ ವರಕವಿ ಬೇಂದ್ರೆಯವರು ಸೃಷ್ಟಿಯ ಆಂತರ್ಯವನ್ನೇ ಕೆದಕುತ್ತಾರೆ.
ಆದರೆ ಸೃಷ್ಟಿಕರ್ತನು ಪ್ರತಿ ದಿನವನ್ನೂ ಸಂತಸಮಯವನ್ನಾಗಿ ಮಾಡಿಕೊಳ್ಳುವಂತಹ ಬುದ್ಧಿಶಕ್ತಿಯನ್ನು ಮನುಷ್ಯನಿಗೆ ಕರುಣಿಸಿದ್ದಾನೆ. ಹೊಸವರುಷ ಹೊಸತಲ್ಲ.. ಏಕೆಂದರದು ಹಳೆಯ ನೋವನ್ನು ಮರೆಸುವುದಿಲ್ಲ, ಅದೇ ಬದುಕು, ಅದೇ ಬೇಗೆ, ಅದೇ ಬೆಂಕಿ ಎಂಬ ಮನದ ಭಾವವನ್ನು ಬದಲಿಸಿಕೊಂಡು ನಮ್ಮ ಪ್ರತಿ ದಿನವನ್ನೂ ನವೀನ ಜನನದಂತೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಎಲ್ಲ ಸನ್ಮಿತ್ರರಿಗೂ ಯುಗಾದಿಯ ಶುಭಾಶಯಗಳು.. 
–>